ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫನ್ನಿ ವೀಡಿಯೋಗಳನ್ನು ನೋಡುತ್ತಿರುತ್ತೇವೆ. ಸೋಶಿಯಲ್ ಮೀಡಿಯಾ (Social Media) ಬಳಕೆದಾರರು ಕೂಡ ಇಂತಹ ವೀಡಿಯೋಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಬಸ್, ಮೆಟ್ರೋ (Metro) ಗಳಲ್ಲಿ ಸಾಕಷ್ಟು ಫನ್ನಿ ಘಟನೆಗಳು ನಡೆಯುತ್ತವೆ. ಅಂಥದ್ದೇ ಒಂದು ಘಟನೆ ನಡೆದಿರುವುದು ವೀಡಿಯೋ ಸಮೇತ ವೈರಲ್ ಆಗುತ್ತಿದೆ.
ಮೆಟ್ರೋದಲ್ಲಿ ಯುವಕನೊಬ್ಬ ಗಾಢ ನಿದ್ದೆಗೆ ಜಾರಿದ್ದು, ನಿದ್ದೆ ಮಂಪರಿನಲ್ಲಿ ಬಳುತ್ತಿದ್ದವನನ್ನು ಯುವತಿ ರಕ್ಷಿಸಿದ್ದಾಳೆ. ಇದರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್
ವೀಡಿಯೋದಲ್ಲೇನಿದೆ..?: ಮೆಟ್ರೋ (Metro) ದಲ್ಲಿನ ಎಲ್ಲಾ ಸೀಟುಗಳು ಭರ್ತಿಯಾಗಿವೆ. ಅದರಂತೆ ಬಾಗಿಲಿನ ಪಕ್ಕದ ಸೀಟಿನ ತುದಿಯಲ್ಲಿ ಯುವತಿಯೊಬ್ಬಳು ಕುಳಿತಿದ್ದಾಳೆ. ಆಕೆಯ ಪಕ್ಕದಲ್ಲಿಯೇ ನೀಲಿ ಟೀ ಶರ್ಟ್ ತೊಟ್ಟ ಯುವಕನೊಬ್ಬ ಪಕ್ಕದಲ್ಲಿ ಕುಳಿತಿದ್ದಾನೆ. ಅವನು ಕುಳಿತಲ್ಲೇ ಮಲಗಿದ್ದಾನೆ. ಗಾಢ ನಿದ್ದೆಯಲ್ಲಿದ್ದ ಯುವಕ ನಿಧಾನವಾಗಿ ಸೀಟಿನಿಂದ ಮುಂದಕ್ಕೆ ವಾಲಲು ಪ್ರಾರಂಭಿಸುತ್ತಾನೆ.
View this post on Instagram
ಯುವಕ ಇನ್ನೇನು ಕೆಳಗೆ ಬೀಳುತ್ತಾನೆ ಎಂಬುದನ್ನು ಗಮನಿಸಿದ ಯುವತಿ, ಆತನ ಟೀ ಶರ್ಟ್ ಎಳೆದಿದ್ದಾಳೆ. ಈ ಮೂಲಕ ಯುವಕ ಕೆಳಗೆ ಬೀಳುವುದನ್ನು ತಡೆದಿದ್ದಾಳೆ. ಈ ವೀಡಿಯೋ ವೈರಲ್ ಆಗಿದ್ದು, ಅಪರಿಚಿತ ಯುವಕನಿಗೆ ಯುವತಿ ಸಹಾಯ ಮಾಡುವುದನ್ನು ನೋಡಿ ಎಲ್ಲರೂ ಆಕೆಯನ್ನು ಶ್ಲಾಘಿಸಿದ್ದಾರೆ.