ರಾಯಚೂರು: ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಡಿಜೆ ಸೌಂಡ್‌ಗೆ ಡಾನ್ಸ್ ಮಾಡುವಾಗ ಕುಸಿದು ಬಿದ್ದ ಯುವಕನಿಗೆ ಏಕಾಏಕಿ ಫಿಟ್ಸ್ ಕಾಣಿಸಿಕೊಂಡು ಮೃತಪಟ್ಟಿರುವ ಘಟನೆ ನಗರದ ತೀನ್ ಖಂದಿಲ್ ವೃತ್ತದ ಬಳಿ ನಡೆದಿದೆ.
ರಾಯಚೂರು (Raichur) ನಗರದ ಮಂಗಳವಾರ ಪೇಟೆಯ ಅಭಿಷೇಕ್ (24) ಮೃತ ಯುವಕ. ಗಣೇಶ ವಿಸರ್ಜನೆಯ ವೇಳೆ ರಾತ್ರಿಯಿಡೀ ಡ್ಯಾನ್ಸ್ ಮಾಡಿ ಅಭಿಷೇಕ್ ಸುಸ್ತಾಗಿ ಕುಸಿದು ಬಿದ್ದಿದ್ದ. ಈ ವೇಳೆ ಆತನಿಗೆ ಫಿಟ್ಸ್ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರ – ಮಣ್ಣು ಕುಸಿದು ಓರ್ವ ಕಾರ್ಮಿಕ ಬಲಿ
ಕೂಡಲೇ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಭಿಷೇಕ್ ಮೃತಪಟ್ಟಿದ್ದಾನೆ. ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.