Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!

Public TV
1 Min Read
Tunga River 2

ಶಿವಮೊಗ್ಗ: ಪ್ರೀತಿಸಲು (Love) ಹುಡುಗಿ ಸಿಗಲಿಲ್ಲ ಅಂತ ಹೇಳಿ, ಪದವಿ ವ್ಯಾಸಂಗ ಮಾಡ್ತಿದ್ದ ಯುವಕನೋರ್ವ ವಾಟ್ಸಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್‌ ಬರೆದಿಟ್ಟು ತುಂಗಾ ನದಿಗೆ (Tunga River) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಜಯದೀಪ್ (24) ಎಂದು ಗುರುತಿಸಲಾಗಿದೆ.

Tunga River

ತೀರ್ಥಹಳ್ಳಿಯ ಪದವಿ ಕಾಲೇಜಿನಲ್ಲಿ‌ ಪದವಿ ವ್ಯಾಸಂಗ ಮಾಡ್ತಿದ್ದ ಯುವಕ ಜಯದೀಪ್ ತೀರ್ಥಹಳ್ಳಿ ತಾಲೂಕಿನ ಇಂದಾವರ ಗ್ರಾಮದ ನಿವಾಸಿ. ಮೃತ ಯುವಕ ಜಯದೀಪ್ ಕಳೆದ ಶನಿವಾರ ತನ್ನ ಬೈಕಿನಲ್ಲಿ ತುಂಗಾನದಿ ಬಳಿ ಆಗಮಿಸಿ ನದಿಯ ದಡದಲ್ಲಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ. ಯುವಕನ ಬೈಕ್, ಆತನ ವಸ್ತುಗಳು ನದಿ ಬಳಿ ದೊರೆತಿದ್ದರಿಂದ ಕುಟುಂಬಸ್ಥರು ಆತ್ಮಹತ್ಯೆಯ ಶಂಕೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅಧಿಕೃತವಾಗಿ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಕಂಟೆಸ್ಟೆಂಟ್ : ನಟ ನಾಗಾರ್ಜುನ ಬದಲಾಗಲಿಲ್ಲ

ತುಂಗಾ ನದಿ ಬಳಿ ಯುವಕನ ಬೈಕ್, ಆತನಿಗೆ ಸೇರಿದ ವಸ್ತುಗಳು ಪತ್ತೆಯಾಗಿದ್ದ ಪರಿಣಾಮ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಸೋಮವಾರ ಯುವಕನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: MUDA Scam | ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ –‌ ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ!

ಮೃತ ಯುವಕ ಜಯದೀಪ್ ಓದಿನಲ್ಲಿ ಮುಂದಿದ್ದ. ಆದರೆ ತನಗೆ ಪ್ರೀತಿ ಮಾಡಲು ಯುವತಿ ಸಿಗುತ್ತಿಲ್ಲ ಅಂತಾ ನೊಂದಿದ್ದ. ಜೊತೆಗೆ ಆನ್‌ಲೈನ್‌ನಲ್ಲಿ ಹಣ ತೊಡಗಿಸಲು ಸಾಲ ಮಾಡಿಕೊಂಡಿದ್ದ. ಈಗಾಗಿ ಮನನೊಂದ ಯುವಕ ವಾಟ್ಸಪ್ ಸ್ಟೇಟಸ್‌ನಲ್ಲಿ ಡೆತ್‌ ಹಂಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತುಂಗಾನದಿಯಿಂದ ಮೃತದೇಹ ಹೊರ ತೆಗೆದು, ಮರಣೋತ್ತರ ಶವ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಘಟನೆ ಕುರಿತು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ

Share This Article