– ಮತ್ತೊಂದೆಡೆ ರಸ್ತೆ ಬದಿ ಕಲ್ಲಿಗೆ ಬೈಕ್ ಡಿಕ್ಕಿ – ಸವಾರ ಸಾವು
ಚಿಕ್ಕಬಳ್ಳಾಪುರ: ಸೋದರ ಮಾವನ ಮಗಳ ಜೊತೆ ಮದುವೆಗೆ ನಕಾರ ಹಿನ್ನೆಲೆ ಸಂಬಂಧಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ.
ಅಜ್ಜವಾರ ಗ್ರಾಮದ 27 ವರ್ಷದ ಮಂಜುನಾಥ್ ನೇಣಿಗೆ ಶರಣಾದ ದುರ್ದೈವಿ. ಅಂದಹಾಗೆ ಮಂಜುನಾಥ್ ಶಿಡ್ಲಘಟ್ಟ ತಾಲೂಕಿನ ಸೋದರ ಮಾವನ ಅಪ್ರಾಪ್ತ ಮಗಳನ್ನ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಕೈ, ಕಾಲು ಕಟ್ಟಿ ಪೂಜಾರಿಯ ಕೊಲೆ – 3 ವಾರಗಳ ಹಿಂದೆಯೇ ಅರಣ್ಯದಲ್ಲಿ ಬೀಸಾಡಿರುವ ಶಂಕೆ
ನಿನ್ನೆ ಸಹ ಬಾಲಕಿಯ ಹುಟ್ಟು ಹಬ್ಬದ ಅಂಗವಾಗಿ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದ. ಈ ವೇಳೆ ಬಾಲಕಿಯನ್ನ ಮದುವೆಯಾಗುವುದಾಗಿ ಮಂಜುನಾಥ್ ಹೇಳಿದ್ದು ಇದಕ್ಕೆ ಸೋದರ ಮಾವ ಹಾಗೂ ಅತ್ತೆ ಮಗಳನ್ನ ಕೊಡೋದಿಲ್ಲ ಎಂದಿದ್ದರಂತೆ. ಇದೇ ನೋವಿನಲ್ಲಿ ಮನೆಗೆ ವಾಪಸ್ ಬಂದಿದ್ದ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತ ಮಾಹಿತಿ ತಿಳಿದುಬಂದಿದೆ. ಮೃತದೇಹವನ್ನ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಸ್ ನಂ.2: ರಸ್ತೆ ಬದಿ ಕಲ್ಲಿಗೆ ಬೈಕ್ ಡಿಕ್ಕಿ- ಸವಾರ ಸಾವು
ಮತ್ತೊಂದು ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಮಾರನಹಳ್ಳಿ ಬಳಿ ನಡೆದಿದೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?
ಕೊನಘಟ್ಟ ಗ್ರಾಮದ 30 ವರ್ಷದ ಮಣಿಕುಮಾರ್ ಮೃತ ಬೈಕ್ ಸವಾರ. ರಸ್ತೆಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾಗಿದೆ. ಮೃತದೇಹವನ್ನ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಶವಾಗರಕ್ಕೆ ರವಾನೆ ಮಾಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.