ಚೆನ್ನೈ: ಇಂದು ಸನಾತನ ಧರ್ಮದ (Sanatana Dharma) ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಬೇಟೆಯಾಡುತ್ತಿದ್ದಾರೆ, ಬಿಜೆಪಿ ಮತ್ತು ಇನ್ನಿತರ ಸಂಘಟನೆಗಳು ಮಗುವನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಮಕ್ಕಳ್ ನೀಧಿಮೈಯಂ ಮುಖ್ಯಸ್ಥ ಹಾಗೂ ನಟ ಕಮಲ್ ಹಾಸನ್ (Kamal Haasan) ಶುಕ್ರವಾರ ತಿಳಿಸಿದ್ದಾರೆ.
VIDEO | “A young kid (Udhayanidhi Stalin) is being hounded today just because he spoke about ‘Sanatan’. His forefathers have spoke about ‘Sanatan’. All of us got to know about the word ‘Sanatan’ because of Periyar. He once used to work in the temple. He was doing ‘puja’ in… pic.twitter.com/KOf6cMoIFa
— Press Trust of India (@PTI_News) September 22, 2023
Advertisement
ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಹೆಸರು ಹೇಳದೆಯೇ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನ ಹೇಳಿಕೆಯನ್ನ ಬೆಂಬಲಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ ನೋಟಿಸ್
Advertisement
ಸನಾತನ ಧರ್ಮದ ಬಗ್ಗೆ ಸಚಿವರು ನೀಡಿದ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ದ್ರಾವಿಡ ಚಳಚಳಿಯ ನಾಯಕರು, ಉದಯನಿಧಿ ಅವರ ತಾತ ಕರುಣಾನಿಧಿ ಅವರೂ ಈ ಬಗ್ಗೆ ಮಾತನಾಡಿದ್ದಾರೆ. ದಿವಂಗತ ಪೆರಿಯಾರ್ ವಿ ರಾಮಸಾಮಿ (Periyar V Ramasamy) ಅವರೂ ಸಾಮಾಜಿಕ ಅನಿಷ್ಠಗಳನ್ನು ಎಷ್ಟು ಕಟುವಾಗಿ ವಿರೋಧಿಸಿದ್ದರು ಎಂಬುದನ್ನ ನಾವು ಅವರ ಜೀವನ ಸ್ವಭಾವದಿಂದಲೇ ಅರ್ಥಮಾಡಿಕೊಳ್ಳಬಹುದು. ನಮಗೆಲ್ಲಾ ಸನಾತನ ಎಂಬ ಪದದ ಅರ್ಥ ತಿಳಿಸಿದ್ದೇ ಅವರಿಂದ ಎಂದು ಹೇಳಿದ್ದಾರೆ.
Advertisement
Advertisement
ಮೊದಲು ಪೆರಿಯಾರ್ ಅವರು ಕಾಶಿಯಲ್ಲಿ ಪೂಜೆ ಮಾಡುತ್ತಿದ್ದರು, ಆದ್ರೆ ಅದೆಲ್ಲವನ್ನೂ ತ್ಯಜಿಸಿ ಮಕ್ಕಳ ಸೇವೆಯೇ ಮಹಾ ಸೇವೆ ಅಂತಾ ಭಾವಿಸಿ ಬರಬೇಕಾದ್ರೆ ಅವರಿಗೆ ಎಷ್ಟು ಕೋಪ ಇದ್ದಿರಬೇಕು. ಅವರನ್ನ ಯಾವುದೇ ರಾಜಕೀಯ ಪಕ್ಷಗಳು ಸ್ವಂತ ಎಂದು ಹೇಳುವಂತಿಲ್ಲ. ಇಡೀ ತಮಿಳುನಾಡಿಗೆ ಅವರು ನಾಯಕರು ಎಂದು ಶ್ಲಾಘಿಸಿದರು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ
ಉದಯನಿಧಿ ಹೇಳಿದ್ದೇನು?
ಲೇಖಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು.
Web Stories