ಧಾರವಾಡ: ಮಹಿಳೆಯರ ಉಚಿತ ಬಸ್ ಪ್ರಯಾಣದ ನಾರಿ `ಶಕ್ತಿ’ ಯೋಜನೆಯನ್ನ (Shakti Scheme) ರಾಜ್ಯ ಸರ್ಕಾರ ಭಾನುವಾರ (ಜೂನ್ 11) ದಿಂದ ಜಾರಿಗೊಳಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆಶಿವಕುಮಾರ್ (DK Shivakumar) ಮೊದಲಾದ ಗಣ್ಯರು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ.
ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ… pic.twitter.com/eR1f5tdE02
— Siddaramaiah (@siddaramaiah) June 11, 2023
ಧಾರವಾಡದಲ್ಲಿ (Dharwad) ಶಕ್ತಿ ಯೋಜನೆಗೆ ಚಾಲನೆ ನೀಡಿದ ವೇಳೆ ವೃದ್ಧೆಯೊಬ್ಬರು ಬಸ್ಸಿನ ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ಸಿನೊಳಗೆ ಪ್ರವೇಶಿಸಿದ ವಿಶೇಷ ಸನ್ನಿವೇಶವೊಂದು ಕಂಡುಬಂದಿದೆ. ಬಸ್ ಹತ್ತುವ ಮುನ್ನ ಅಜ್ಜಿ ತನ್ನ ತಲೆಯನ್ನು ಬಸ್ ಮೆಟ್ಟಿಲ ಮೇಲಿಟ್ಟು ನಮಸ್ಕರಿಸಿದ್ದು, ಅಜ್ಜಿಯ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಉಚಿತ ಬಸ್ ಪ್ರಯಾಣದ ಮೊದಲ ಟಿಕೆಟ್ ಪಡೆದ ಅದೃಷ್ಟಶಾಲಿ ಮಹಿಳೆ ಇವರೇ..!
ಶಕ್ತಿಯೋಜನೆ ಜಾರಿಯಾದ ಮೊದಲ ದಿನವೇ ಮಹಿಳಾಮಣಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಉಚಿತ ಸಂಚಾರದ ಕೊಡುಗೆ ಲಭ್ಯ ಆಗಿರೋದಕ್ಕೆ ನಾರಿಮಣಿಯರು ಫುಲ್ ಖುಷಿಯಾಗಿದ್ದಾರೆ. ಕೆಲ ಮಹಿಳೆಯರು ಕುಣಿದು ಕುಪ್ಪಳಿಸಿ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ. ಪ್ರವಾಸಿ ತಾಣಗಳಿಗೆ ತೆರಳುವ ಬಸ್‌ಗಳಲ್ಲಿ ಮಹಿಳೆಯಯರೇ ಹೆಚ್ಚು ಸಂಖ್ಯೆಯಲ್ಲಿದ್ದದ್ದು ಕಂಡುಬಂದಿದೆ. ಕೆಲವರು ಕುಟುಂಬದ ಜೊತೆ.. ಇನ್ನೂ ಕೆಲವರು ಬಂಧುಗಳ ಜೊತೆ.. ಇನ್ನೂ ಕೆಲವರು ಗೆಳೆತಿಯರ ಜೊತೆ ಟ್ರಿಪ್ ಹೊರಟಿದ್ದ ದೃಶ್ಯ ಕಂಡುಬಂದಿದೆ. ಇದನ್ನೂ ಓದಿ: ಶಕ್ತಿ ಯೋಜನೆ- ಮಂಜುನಾಥನ ಸನ್ನಿಧಿಗೆ ಮೊದಲ ಬಸ್ ಪ್ರಯಾಣ
ಉಚಿತ ಪ್ರಯಾಣದ ಟಿಕೆಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮಹಿಳೆಯರು ಸಂಭ್ರಮಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಲ ಮಹಿಳೆಯರು, ʻʻಪತಿ ಜೊತೆಗೆ ಜಗಳ ಆದ್ರೆ ತವರಿಗೆ ಹೋಗಬಹುದು, ತವರಲ್ಲಿ ಜಗಳ ಆದ್ರೆ ಪತಿ ಮನೆಗೆ ಬರಬಹುದುʼʼ ಎಂದು ತಮಾಷೆ ಮಾಡಿದ್ದಾರೆ. ಇದನ್ನೂ ಓದಿ: ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!