DistrictsKarnatakaLatestMain PostTumakuru

ರಸ್ತೆ ಅಭಿವೃದ್ಧಿ ಕಾಮಗಾರಿಗೆ ತೆಗೆದಿದ್ದ ಹಳ್ಳಕ್ಕೆ ಬೈಕ್ ಬಿದ್ದು ನೌಕರ ಸಾವು

ತುಮಕೂರು: ರಸ್ತೆ ಅಭಿವೃದ್ಧಿ ಕಾಮಗಾರಿಗೆಂದು (Road Construction) ತೆರೆದಿದ್ದ ಹಳ್ಳಕ್ಕೆ ಬೈಕ್ (Bike) ಬಿದ್ದು, ಸವಾರ (Biker) ಸಾವನ್ನಪ್ಪಿರುವ ಘಟನೆ ತುಮಕೂರು (Tumakuru) ನಗರದ ಬೆಳಗುಂಬ ರಸ್ತೆಯ ಭರಣಿ ಢಾಬಾ ಬಳಿ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ನೌಕರ ಶಿವಕುಮಾರ್ (32) ಎಂದು ಗುರುತಿಸಲಾಗಿದೆ. ಶಿವಕುಮಾರ್ ಹನುಮಂತಪುರದಿಂದ ಬೆಳಗುಂಬದ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಿವಕುಮಾರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೂದಲು ಉದುರುತ್ತಿದೆ ಎಂದು ಮನನೊಂದ ಯುವಕ ಡೆತ್‍ನೋಟ್ ಬರೆದು ಆತ್ಮಹತ್ಯೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಹೋಬಳಿಯ ಸೀತಾಪುರ ಗ್ರಾಮದ ನಿವಾಸಿಯಾಗಿದ್ದ ಶಿವಕುಮಾರ್, ಬೆಳಗುಂಬದಲ್ಲಿ ವಾಸವಿದ್ದರು. ಆಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: 50 ಕೋಟಿಯ 30 ಹೆಬ್ಬಾವು, ಅಪರೂಪದ ಪ್ರಾಣಿಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದ ಮಹಿಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ಲು

ಕಳೆದ 3 ತಿಂಗಳುಗಳಿಂದ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೂ, ಸೂಚನಾ ಫಲಕವನ್ನು ಅಳವಡಿಸಿರಲಿಲ್ಲ. ಈಗಾಗಲೇ ಸುಮಾರು 15-20 ಜನರು ಹಳ್ಳಕ್ಕೆ ಬಿದ್ದು, ಗಾಯಗೊಂಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದೀಗ ಒಬ್ಬರ ಪ್ರಾಣ ಹೋಗಿದೆ. ಕಾಮಗಾರಿ ಪೂರ್ಣಗೊಳಿಸಿ ಹಳ್ಳ ಮುಚ್ಚದಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹಳ್ಳ ಮುಚ್ಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button