ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಕಲಿ ವೈದ್ಯರ (Fake Doctor) ಹಾವಳಿ ಹೆಚ್ಚಾಗುತ್ತಿದ್ದು, ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ತಂದಿಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಘಟನೆಯೊಂದು ಸಾಕ್ಷಿಯಾಗಿದೆ. ಮಾತ್ರೆ ಕೊಟ್ಟು ಸರಿಪಡಿಸಬಹುದಾಗಿದ್ದ ಕಾಯಿಲೆಯನ್ನ ನಕಲಿ ವೈದ್ಯ ಇಂಜೆಕ್ಷನ್, ಮಾತ್ರೆ ಕೊಟ್ಟು ಮಹಿಳೆಯನ್ನ (Women) ಶೋಚನಿಯ ಸ್ಥಿತಿಗೆ ತಂದೊಡ್ಡಿದ್ದಾನೆ.
Advertisement
ಜ್ವರ (Fever) ಅಂತ ಹೋದ ಮಹಿಳೆಯ ಸ್ಥಿತಿ ಶೋಚನಿಯವಾಗಿದ್ದು, ಜೀವನದ ಮೇಲಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು
Advertisement
ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿರೋ ಜ್ಯೋತಿಗೆ ಜ್ವರ ಇದ್ದ ಕಾರಣ ಹೆಗ್ಗನಹಳ್ಳಿ ಸಂಜೀವಿನಿ ನಗರದಲ್ಲಿದ್ದ ಸಹನಾ ಪಾಲಿಕ್ಲಿನಿಕ್‌ಗೆ ಹೋಗಿದ್ದಾರೆ. ಕ್ಲಿನಿಕ್ (Clinic) ನಲ್ಲಿದ್ದ ನಕಲಿ ಡಾಕ್ಟರ್ ನಾಗರಾಜ್ ಶವಣೂರ್‌ಗೆ ತೋರಿಸಿದ್ದಾರೆ. ಮಹಿಳೆಯ ಸೊಂಟದ ಭಾಗಕ್ಕೆ ಒಂದೇ ಜಾಗದಲ್ಲಿ ಎರಡು ಇಂಜೆಕ್ಷನ್ ಚುಚ್ಚಿ ಮಾತ್ರೆ ಬರೆದು ಕಳಿಸಿಕೊಟ್ಟಿದ್ದಾನೆ. ಇದನ್ನೂ ಓದಿ: ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ವಿಧಿವಶ
Advertisement
Advertisement
ದಿನ ಕಳೆದಂತೆ ಇಂಜೆಕ್ಷನ್ ಕೊಟ್ಟ ಜಾಗ ಸಂಪೂರ್ಣ ಕಪ್ಪಾಗಲು ಶುರುವಾಗಿದೆ. ಮತ್ತೆ ಕ್ಲಿನಿಕ್‌ಗೆ ಹೋಗಿ ಜ್ಯೋತಿ ನಾಗರಾಜ್‌ಗೆ ತೋರಿಸಿದ್ದಾರೆ. ಆಗಲೂ ಆಯಿಟ್‌ಮೆಂಟ್ ಕೊಟ್ಟು ಕಳಿಸಿದ್ದಾನೆ. ಕೊಟ್ಟ ಆಯಿಟ್‌ಮೆಂಟ್‌ಗೂ ಕಡಿಮೆ ಆಗದೇ ಇಂಜೆಕ್ಷನ್ ನೀಡಿದ ಜಾಗ ಕೊಳೆಯಲು ಶುರುವಾಗಿದೆ. ನಂತರ ಬೇರೊಂದು ಆಸ್ಪತ್ರೆಗೆ ಹೋದಾಗ ಶಸ್ತ್ರಚಿಕಿತ್ಸೆಗೆ ಸೂಚನೆ ನೀಡಿದ್ದಾರೆ. ವೈದ್ಯರ ಸೂಚನೆಯಂತೆ ಸದ್ಯ ಮಹಿಳೆ ಶಸ್ತ್ರಚಿಕಿತ್ಸೆ (Surgery) ಮಾಡಿಸಿದ್ದು, ಸ್ವಲ್ಪಮಟ್ಟಿಗೆ ನಡೆಯುತ್ತಿದ್ದಾರೆ. ಆದರೂ ನರಕ ಯಾತನೇ ಅನುಭವಿಸುತ್ತಿದ್ದಾರೆ.’
ನಕಲಿ ಡಾಕ್ಟರ್ ನಾಗರಾಜ್ ಶವಣೂರ್ ಅವಾಂತರದ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಗೆ (Rajagopalnagar Police Station) ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ನಕಲಿ ಡಾಕ್ಟರ್ ನಾಗರಾಜ್ ಶವಣೂರ್ ಹಾಗೂ ಕ್ಲಿನಿಕ್ ಮಾಲೀಕ ಕುಮಾರ್ ಸ್ವಾಮಿಯನ್ನ ಬಂಧಿಸಿದ್ದು ತನಿಖೆ ಮಾಡುತ್ತಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದರೆ.