ಚಿಕ್ಕಬಳ್ಳಾಪುರ: ನಗರದ ಮೀನು-ಮಾಂಸ ಮಾರಾಟ ಮಳಿಗೆಗೆಳ ನಗರಸಭೆ ಸಂಕೀರ್ಣದ ಬಳಿ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ನಗರದ ಸಂತೆ ಮಾರುಕಟ್ಟೆ ಬಳಿಯ ಸಂಕೀರ್ಣದಲ್ಲಿ ತಡರಾತ್ರಿ ಮಲಗಿದ್ದ ಮಹಿಳೆಯ ಮೇಲೆ ತಳ್ಳುಗಾಡಿಯಲ್ಲಿ ಚಕ್ಕೆ ಲವಂಗ, ಹರಿಶಿಣ-ಕುಂಕಮ, ಮಸಾಲೆ ಪದಾರ್ಥಗಳ ಮಾರಾಟ ಮಾಡುತ್ತಿದ್ದ ಅಬ್ದುಲ್ಲಾ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರಕ್ಕೀಡಾದ ಮಹಿಳೆ ಸರಿ ಸುಮಾರು 40 ವರ್ಷ ಪ್ರಾಯದವರಾಗಿದ್ದಾರೆ ಎನ್ನಲಾಗಿದೆ. ಆರೋಪಿಯು ನೀಚ ಕೃತ್ಯ ಎಸಗಿರುವುದು ಸಂಕೀರ್ಣದಲ್ಲಿ ಆಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ
ನಿದ್ರೆಯಲ್ಲಿದ್ದ ಮಹಿಳೆಯ ಮೇಲೆ ಆರೋಪಿಯು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಎಚ್ಚರಗೊಂಡು ವಿರೋಧ ವ್ಯಕ್ತಪಡಿಸಿದಾಗ ತಲೆ, ಮುಖಕ್ಕೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅಪ್ಪು ಫೋಟೋಗಳಿಗೆ ಭಾರೀ ಬೇಡಿಕೆ – ನಮ್ಮ ಮನೆ ದೇವರೆಂದ ಅಭಿಮಾನಿಗಳು!
ಘಟನಾ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಫೂಟೇಜ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.