– ಸೊಸೆ ಕೂಲಿ ಕೆಲಸಕ್ಕೆ ಹೋಗಬಾರದು ಎಂದು ಮನೆಯಲ್ಲೇ ಅಂಗಡಿ ಶುರುಮಾಡಿಸಿದ ಅತ್ತೆ
ಹಾವೇರಿ: ಕಾಂಗ್ರೆಸ್ (Congress) ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ, ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿ ಮಾಡಿದೆ. ಗೃಹಲಕ್ಷ್ಮಿ ಹಣದಿಂದ ಮಹಿಳೆಯರು ಫ್ರಿಡ್ಜ್, ವಾಷಿಂಗ್ ಮಷಿನ್ ಖರೀದಿ ಮಾಡಿದ್ದು, ಅಜ್ಜಿ ಗೃಹಲಕ್ಷ್ಮಿ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಎಲ್ಲರಿಗೂ ಗೊತ್ತಿರೋ ವಿಚಾರ. ಇದರ ಬೆನ್ನಲ್ಲೇ ಈಗ ಅತ್ತೆಗೆ ಬಂದ ಹಣದಲ್ಲಿಯೇ ಸೊಸೆಗೆ ಪ್ಯಾನ್ಸಿ ಸ್ಟೋರ್ ಹಾಕಿದ್ದಾರೆ.
Advertisement
ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಗೃಹಲಕ್ಷ್ಮೀ ಹಣದಿಂದ ಪ್ಯಾನ್ಸಿ ಸ್ಟೋರ್ ಪ್ರಾರಂಭವಾಗಿದೆ. ಸೊಸೆ ಹೊರಗೆ ಕೆಲಸಕ್ಕೆ ಹೋಗಬಾರದು ಎಂದು ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟ ಅತ್ತೆ ಕಾರ್ಯಕ್ಕೆ ಈಗ ಜನ ಶಹಬ್ಬಾಸ್ ಅಂತಿದ್ದಾರೆ. ನೀರಲಗಿ ಗ್ರಾಮದ ದ್ರಾಕ್ಷಾಯಿಣಿ ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟಿದ್ದರು. 10 ಕಂತಿನ 20,000 ರೂಪಾಯಿ ಹಣ ಕೂಡಿಟ್ಟು ಸೊಸೆ ಕುಮಾರಿ ಶಿವನಗೌಡ ಪಾಟೀಲ್‌ಗೆ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲಾ ಕಾರಾಗೃಹಗಳ ವ್ಯವಸ್ಥೆಯ ವರದಿ ಆಧರಿಸಿ ಶಾಶ್ವತ ಕ್ರಮ: ಪರಮೇಶ್ವರ್
Advertisement
Advertisement
ಶ್ರಾವಣ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್‌ಗೆ ಪೂಜೆ ಮಾಡಿ ಚಾಲನೆ ನೀಡಿದರು. ಸಂಭ್ರಮದಿಂದ ಫ್ಯಾನ್ಸಿ ಸ್ಟೋರ್ ಶುರು ಮಾಡಿದ ಅತ್ತೆ-ಸೊಸೆ ಪರಸ್ಪರ ಭಾವುಕರಾದರು. ಸೊಸೆ ಮಗಳಿದ್ದಂಗೆ, ಅವಳು ಹೊರಗೆ ದುಡಿಯೋಕೆ ಹೋಗೋದು ಬೇಡ ಅಂತಾ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ.
Advertisement
ಹತ್ತು ಕಂತಿನ ಹಣವನ್ನ ಕೂಡಿಟ್ಟು ನಮ್ಮ ಅತ್ತೆ-ಮಾವ ನನಗೆ ಅಂಗಡಿ ಹಾಕಿಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರು ಕೂಲಿ ಕೆಲಸ ಹಾಗೂ ಹೊಲಕ್ಕೆ ಹೋಗಬೇಕು. ಗೃಹಲಕ್ಷ್ಮಿ ಹಣದಿಂದ ಅಂಗಡಿ ಪ್ರಾರಂಭವಾಗಿದೆ ಎಂದು ಸೊಸೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ಹಂಚಿಕೆ ಮತ್ತೊಂದು ಮುಡಾ ಹಗರಣ- ಛಲವಾದಿ ನಾರಾಯಣಸ್ವಾಮಿ