ಹಾಸನ: ಎಂಜಿನಿಯರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಬ್ಬಳು ಮತ್ತೊಬ್ಬನ ಜೊತೆ ಮದುವೆಯಾಗಿರೋ ಘಟನೆ ಹಾಸನದಲ್ಲಿ ನಡೆದಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಮದರಂಗಿ ಶಾಸ್ತ್ರ ಮುಗಿಸಿಕೊಂಡು ಬಳಿಕ ಶನಿವಾರ ಮುಂಜಾನೆ ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಆಗಿದ್ದಳು.
ಯುವತಿಗೆ ಬೆಂಗಳೂರು ಮೂಲದ ಎಂಜಿನಿಯರ್ ಜತೆ ಎರಡು ತಿಂಗಳ ಹಿಂದೆ ಆಕೆಗೆ ನಿಶ್ಚಿತಾರ್ಥವಾಗಿತ್ತು. ಆದ್ರೆ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ವರಿಸುವ ಮುನ್ನವೇ ಯುವತಿ ಮಧ್ಯಪ್ರದೇಶದ ಇಂದೋರ್ ಯುವಕನ ಜೊತೆ ನವೆಂಬರ್ 11 ಮದುವೆಯಾಗಿದ್ದಾಳೆ. ಆದರೆ ಈ ವಿಷಯವನ್ನು ಯುವತಿ ಬೇರೆ ಯಾರಿಗೂ ತಿಳಿಸಿರಲಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ಇಂದು ಶನಿವಾರ ಸಂತೆಯಲ್ಲಿ ನಡೆಯಬೇಕಿದ್ದ ಮದುವೆ ರದ್ದಾಗಿದೆ. ವರನಿಗೆ ವಾಟ್ಸಪ್ ನಲ್ಲಿ ಮದುವೆ ಫೋಟೋ ಹಾಗೂ ಮದುವೆ ಪ್ರಮಾಣ ಪತ್ರವನ್ನು ಯುವತಿ ಕಳುಹಿಸಿದ್ದಾಳೆ ಎನ್ನಲಾಗಿದೆ.
ರೈಲ್ವೇ ಸ್ಟೇಷನಲ್ಲಿ ಪರಿಚಯವಾಗಿ ಲಾಡ್ಜ್ ನಲ್ಲಿ ರೇಪ್ ಮಾಡ್ದ – ಬೆಂಗಳೂರು ಮಹಿಳೆಗೆ ಮೋಸ ಮಾಡಿದ ಕಾಮುಕ https://t.co/2zQOyYGAzk#Bengaluru #Railwaystation #Rape #Lodge #Cheated #Man #Woman pic.twitter.com/IULXezq2lM
— PublicTV (@publictvnews) November 19, 2017