ರಾಯಚೂರು: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಕಾಂಗ್ರೆಸ್‍ನ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಶಕ್ತಿ ಯೋಜನೆಗೆ (Shakthi Scheme) ಈಗಲೂ ಮಹಿಳಾ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಳೆದ ಆ.29ರ ವರೆಗೆ 48.50 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿ, ಪ್ರಯೋಜನ ಪಡೆದಿದ್ದಾರೆ. ಆದ್ರೆ ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರು ಕಿತ್ತಾಡೋದನ್ನ ಮಾತ್ರ ಬಿಟ್ಟಿಲ್ಲ. ರಾಯಚೂರು ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಸೀಟಿಗಾಗಿ ಹರಸಾಹಸ ನಡೆಸಿದ್ದಾಳೆ. ಕೊನೆಗೆ ಮತ್ತೊಬ್ಬ ವ್ಯಕ್ತಿಯ ಬೆನ್ನಿನ ಮೇಲೆ ಹತ್ತಿ, ಕಿಟಕಿ ಮೂಲಕ ಬಸ್ ಏರಿ ಸೀಟು ಗಿಟ್ಟಿಸಿಕೊಂಡಿದ್ದಾಳೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಸಮನ್ಸ್
ರಾಯಚೂರು-ಬಾಗಲಕೋಟೆ ಮಾರ್ಗದ ಬಸ್ ಹತ್ತಲು ಬಂದಿದ್ದ ಮಹಿಳೆ ಮುಂಭಾಗದ ಡೋರ್‌ನಲ್ಲಿ ರಶ್ ಆಗಿದ್ದನ್ನ ಕಂಡಿದ್ದಾಳೆ. ಹಾಗಾಗಿ ಕಿಟಕಿ ಮೂಲಕ ಬ್ಯಾಗನ್ನು ಒಳಗೆ ತೂರಿಸಿ ಸೀಟು ಹಿಡಿಯಲು ಮುಂದಾಗಿದ್ದಾಳೆ. ಮತ್ತೊಬ್ಬ ವ್ಯಕ್ತಿಯ ಬೆನ್ನಿನ ಮೇಲೆ ನಿಂತು ಕಿಟಕಿ ಮೂಲಕ ನುಗ್ಗಿದ್ದಾಳೆ. ಈ ವೇಳೆ ಕೆಲ ಕಾಲ ಕಿಟಕಿಯಲ್ಲೇ ಸಿಕ್ಕಿಕೊಂಡು ಪರದಾಟ ಸಹ ನಡೆಸಿದ್ದಾಳೆ. ಈ ಹಾಸ್ಯಾಸ್ಪದ ದೃಶ್ಯ ಇದೀಗ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ. ಇದನ್ನೂ ಓದಿ: ʻಗೃಹಲಕ್ಷ್ಮಿʼ ಯೋಜನೆಗೆ ಅದ್ಧೂರಿ ಚಾಲನೆ – ನುಡಿದಂತೆ ನಡೆದಿದ್ದೇವೆ, ಕರ್ನಾಟಕ ದಿವಾಳಿಯಾಗಿಲ್ಲ ಮೋದಿಯವರೇ: ಸಿಎಂ