ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ತನ್ನ ಪುತ್ರ ಜೈಲುಪಾಲದ ಸುದ್ದಿ ತಿಳಿದು ತಾಯಿ ಕುಸಿದು ಬಿದ್ದಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.
ತನ್ನ ಪುತ್ರ ಜೈಲುಪಾಲಾದ ಎಂದು ನೊಂದ ತಾಯಿ ನಾಗಮಂಗಲ ಕೋರ್ಟ್ ಮುಂಭಾಗವೇ ಕುಸಿದು ಬಿದ್ದರು. ಮತ್ತೊಂದೆಡೆ ತಮ್ಮ ಮಕ್ಕಳು ಜೈಲು ಸೇರಿದ್ದನ್ನು ನೋಡಿ ಕುಟುಂಬಸ್ಥರು ಕಣ್ಣೀರಿಟ್ಟರು.
ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಆರೋಪಿಗಳ ಕುಟುಂಬಸ್ಥರು ನೂರಾರು ಸಂಖ್ಯೆಯಲ್ಲಿ ಕೋರ್ಟ್ ಎದುರು ಜಮಾಯಿಸಿದ್ದರು.