ಕಲಬುರಗಿ: ರೈಲಿನಿಂದ ಇಳಿಯಲು ಹೋಗಿ ರೈಲಿನಡಿ ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಸಲ್ಲುಮಿನಿಸಾ ಬೇಗಂ(69) ಮೃತ ದುರ್ದೈವಿ. ಕಲಬುರಗಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಮುಸಿರಾಬಾದ್ ನಿವಾಸಿಯಾದ ಸಲ್ಲುಮಿನಿಸಾ ಬೇಗಂ ಪತಿಯೊಂದಿಗೆ ಹೈದರಾಬಾದ್ ಗೆ ತೆರಳುತ್ತಿದ್ದರು.
Advertisement
ಹೈದರಾಬಾದಗೆ ತೆರಳುತ್ತಿದ್ದ ದಂಪತಿ ತಪ್ಪಾಗಿ ವಿಜಾಪೂರ-ರಾಯಚೂರು ಪ್ಯಾಸೆಂಜರ್ ರೈಲು ಹತ್ತಿದ್ದರು. ರೈಲು ಹೊರಡುವಾಗ ಅರಿವಾಗಿ ಪತಿಯೊಂದಿಗೆ ಕೆಳಗೆ ಇಳಿಯುವಾಗ ಆಯ ತಪ್ಪಿ ರೈಲಿನಡಿ ಮಹಿಳೆ ಬಿದ್ದು ಸಾವನ್ನಪ್ಪಿದ್ದಾರೆ.
Advertisement
ವಾಡಿ ರೈಲ್ವೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.