– ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಂಡಿದ್ದಾಗ ದುರ್ಘಟನೆ
ಮಂಗಳೂರು: ಸಮುದ್ರಕ್ಕೆ ಸ್ನಾನಕ್ಕೆ ಇಳಿದಿದ್ದ ಮಹಿಳೆ ಸಾವಿಗೀಡಾಗಿರುವ ಘಟನೆ ಮಂಗಳೂರು (Mangaluru) ಹೊರವಲಯದ ಸೋಮೇಶ್ವರ ಕಡಲ ತೀರದಲ್ಲಿ ನಡೆದಿದೆ.
Advertisement
ದೇರೆಬೈಲ್ ನಿವಾಸಿ ಉಷಾ (72) ಮೃತ ಮಹಿಳೆ. ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಂಡು ಸಮುದ್ರಕ್ಕೆ ಸ್ನಾನಕ್ಕಿಳಿದಿದ್ದರು. ಇದನ್ನೂ ಓದಿ: ಬೆಳ್ತಂಗಡಿ| ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು
Advertisement
Advertisement
ಇತ್ತೀಚೆಗೆ ತಂಗಿ ನಿಶಾ ಭಂಡಾರಿ ಅವರ ಪತಿ ಕರುಣಾಕರ ಭಂಡಾರಿ ನಿಧನರಾಗಿದ್ದರು. ಮೃತ ಕರುಣಾಕರ ಭಂಡಾರಿಯ ಪಿಂಡ ಪ್ರದಾನ ವಿಧಿಯಲ್ಲಿ ಉಷಾ ಭಾಗವಹಿಸಿದ್ದರು. ಪುರೋಹಿತರು ಸಮುದ್ರ ತೀರದಲ್ಲಿ ಪಿಂಡ ಪ್ರದಾನ ನೆರವೇರಿಸಿದ ಬಳಿಕ ಮಹಿಳೆ ಸಮುದ್ರಕ್ಕೆ ಇಳಿದಿದ್ದರು. ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.
Advertisement
ಮಹಿಳೆ ರಕ್ಷಣೆಗೆ ಸ್ಥಳೀಯರು ಮತ್ತು ನಾಡದೋಣಿ ಮೀನುಗಾರರು ಮುಂದಾದರು. ಆದರೆ, ಸಮುದ್ರದಲ್ಲಿ ಮುಳುಗಿ ಮಹಿಳೆ ಮೃತಪಟ್ಟಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮ