ಬೆಂಗಳೂರು: ರಾಜಧಾನಿಯಲ್ಲಿ ಇಂದು ವರುಣನ ಆರ್ಭಟಕ್ಕೆ ಮಹಿಳೆಯೊಬ್ಬರು ಬಲಿಯಾದವರು. ಆಸ್ಪತ್ರೆಯಲ್ಲಿ ಮೃತ ಮಹಿಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತಪಟ್ಟ ಮಹಿಳೆ ಸಾವಿನ ಹಿಂದಿನ ಸ್ಟೋರಿ ನಿಜಕ್ಕೂ ಮನಕಲಕುವಂತಿದೆ.
ಏನದು ಸ್ಟೋರಿ?
ಮೃತ ಭಾನುರೇಖಾ ಎಲೆಕ್ಟ್ರಾನಿಕ್ ಸಿಟಿಯ ಪ್ರಗತಿ ನಗರದಲ್ಲಿ ವಾಸವಾಗಿದ್ದರು. ಮೂಲತಃ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ತೇಲಾಪೋರಲು ಗ್ರಾಮದವರಾದ ಇವರು, ಹೊಸದಾಗಿ ಪ್ರಗತಿ ನಗರದಲ್ಲಿ ಮನೆ ಖರೀದಿ ಮಾಡಿದ್ದರು. ಮನೆ ನೋಡಲು ಆಂಧ್ರ ಪ್ರದೇಶದಿಂದ ಭಾನುರೇಖಾ ಸಂಬಂಧಿಗಳು ಆಗಮಿಸಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆಗೆ ಮಹಿಳೆ ಬಲಿ; ಆಂಧ್ರದಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬಸ್ಥರ ಆಕ್ರಂದನ
ಈ ವೇಳೆ ಕ್ಯಾಬ್ ಬುಕ್ ಮಾಡಿ ಬೆಂಗಳೂರು ಸುತ್ತಾಟಕ್ಕೆ ಕುಟುಂಬ ಬಂದಿತ್ತು. ಇಸ್ಕಾನ್‌ಗೆ ಹೋಗಿ ವಾಪಸ್ ಕಬ್ಬನ್ ಪಾರ್ಕ್‌ಗೆ ಹೋಗುವ ವೇಳೆ ಕೆಆರ್ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಮುಳುಗಿ ಭಾನುರೇಖಾ ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿ ಬೆಂಗಳೂರಿನ ಕೆ.ಆರ್.ವೃತ್ತದ ಅಂಡರ್‌ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 23 ವರ್ಷದ ಭಾನುರೇಖಾ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿದ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಅಸ್ವಸ್ಥಗೊಂಡಿರುವ ಎಲ್ಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಮರಣ ಮಳೆ; ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ – ಸಿಎಂ