ತುಮಕೂರು: ಮಕ್ಕಳ ಜೊತೆ ಸಂಪಿಗೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು (Tumakuru) ತಾಲ್ಲೂಕಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೊನಿಯಲ್ಲಿ ನಡೆದಿದೆ.
ವಿಜಯಲಕ್ಷ್ಮಿ ತನ್ನ ಮಕ್ಕಳ ಜೊತೆ ಸಂಪಿಗೆ ಬಿದ್ದು ಆತ್ಮಹತ್ಯೆ ಶರಣಾರದವರು. ಶಿವಗಂಗೆ ಮೂಲದ ಸಂಪತ್ ಕುಮಾರ್‌ಗೆ ನೆಲಮಂಗಲ ಮೂಲದ ವಿಜಯಲಕ್ಷ್ಮಿ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾಗಿ ಕೇವಲ 6 ವರ್ಷ ಅಷ್ಟೇ ಆಗಿತ್ತು. ತುಮಕೂರಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಗಂಡ ಸಂಪತ್ ಕುಮಾರ್, ಇಬ್ಬರು ಮಕ್ಕಳು ಹಾಗೂ ಅತ್ತೆ ಮಾವರೊಂದಿಗೆ ಅನ್ಯೋನ್ಯವಾಗಿ ಸಂಸಾರ ಸಾಗಿತ್ತು. ಇದನ್ನೂ ಓದಿ: ಚಿತ್ರದುರ್ಗ| ಮರಕ್ಕೆ ಬೊಲೆರೊ ಡಿಕ್ಕಿ – ನಾಲ್ವರು ದುರ್ಮರಣ
ಗಂಡ ಸಂಪತ್ ಕುಮಾರ್ ಕಂಪನಿಯೊಂದರಲ್ಲಿ ಕೆಲಸ, ಅತ್ತೆಯೂ ಫ್ಯಾಕ್ಟರಿ ಕೆಲಸ. ವಿಜಯಲಕ್ಷ್ಮಿ ಇಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇದ್ದಳು. ಇವತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮುಂದೆ ಇದ್ದ ಸಂಪಿನಲ್ಲಿ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ 6 ಗಂಟೆಗೆ ಗಂಡ ಸಂಪತ್ ಕುಮಾರ್ ಕೆಲಸ ಮುಗಿಸಿ ಬಂದಾಗ ಮನೆ ಬಾಗಿಲು ಕ್ಲೋಸ್ ಆಗಿತ್ತು. ನೀರಿನ ಸಂಪು ಓಪನ್ ಇತ್ತು. ಎಷ್ಟೇ ಹುಡುಕಿದರೂ ಪತ್ನಿ-ಮಕ್ಕಳು ಸಿಗದಿದ್ದಾಗ ಸಂಪತ್ ಕುಮಾರ್ ಸಂಪಿನಲ್ಲಿ ಬಡಿಗೆ ಹಾಕಿ ನೋಡಿದ್ದಾನೆ. ಆಗ ಸಂಪಿಗೆ ಬಿದ್ದಿರೋದು ಖಚಿತವಾಗಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮೂವರ ಮೃತದೇಹ ಹೊರ ತೆಗೆದಿದ್ದಾರೆ. ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಸಾವಿನ ಕಾರಣ ನಿಗೂಢವಾಗಿದೆ. ಇದನ್ನೂ ಓದಿ: ಒಂದೇ ದಿನ ರಾಜ್ಯದ 7 ಜಿಲ್ಲೆಗಳಿಗೆ ಹುಸಿ ಬಾಂಬ್ ಬೆದರಿಕೆ

