ಹಾಸನ: ಇದು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಹಾಸನ ಜಿಲ್ಲಾಸ್ಪತ್ರೆಯಲ್ಲಿ ನಡೆದ ಮಗು ಕಳ್ಳತನ ಪ್ರಕರಣ. ನರ್ಸ್ ಸೋಗಿನಲ್ಲಿ ಬಂದ ಮಹಿಳೆಯೊಬ್ಬಳು ನವಜಾತ ಗಂಡು ಶಿಶುವನ್ನು ಎಲ್ಲರ ಮುಂದೆಯೇ ಕದ್ದು ಪರಾರಿಯಾಗಿದ್ದಳು.
ಜಿಲ್ಲೆಯ ಸಕಲೇಶಪುರದ ಕುಶಾಲನಗರ ಬಡಾವಣೆಯ ಮಹಾದೇವಿ ಎಂಬ ತಾಯಿಯೇ ಮಗು ಕಳೆದುಕೊಂಡ ಮಹಿಳೆ. ಅಂದು ಮಹಾದೇವಿ 6ನೇ ಹೆರಿಗೆಗೆಂದು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಡಿಸೆಂಬರ್ 4 ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ-ಮಗುವಿನ ಬಳಿಗೆ ನರ್ಸ್ ಸೋನಿನಲ್ಲಿ ಬಂದ ಮಹಿಳೆಯೊಬ್ಬಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಮಗುವಿಗೆ ರಕ್ತ ಪರೀಕ್ಷೆ ಮಾಡಿಸಬೇಕು ಕರೆದುಕೊಂಡು ಬನ್ನಿ ಎಂದು ಹೇಳಿದ್ದಳು.
Advertisement
Advertisement
ಆಗ ಮಹದೇವಿಯ ಅಕ್ಕ ನವಜಾಶ ಶಿಶುವನ್ನು ಎತ್ತಿಕೊಂಡು ನರ್ಸ್ ಸೋಗಿನಲ್ಲಿದ್ದ ಮಹಿಳೆ ಜೊತೆ ತೆರಳಿದ್ದಾರೆ. ಹೊರಗೆ ಹೋದ ನಂತರ ತಾಯಿ ಕಾರ್ಡ್ ತೆಗೆದುಕೊಂಡು ಬಾ ಎಂದು ಮಹಿಳೆಯನ್ನು ಮತ್ತೆ ಹೆರಿಗೆ ಕೊಠಡಿಗೆ ಕಳಿಸಿದ ಮಹಿಳೆ ಮಗು ತೆಗೆದುಕೊಂಡು ಪರಾರಿಯಾಗಿದ್ದಳು. ಮಹದೇವಿಯ ಅಕ್ಕನ ನೆರವಿನಿಂದ ಕಳ್ಳಿ ಮಗುವನ್ನು ಹೊರಗಡೆ ತೆಗೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
Advertisement
ಈ ಸಂಬಂಧ ನಗರ ಠಾಣೆಯಲ್ಲಿ ಪೋಷಕರಿಂದ ಮತ್ತು ಜಿಲ್ಲಾಸ್ಪತ್ರೆಯಿಂದ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಆದರೆ ಆ ನರ್ಸ್ ಸೋಗಿನಲ್ಲಿ ಬಂದ ಮಗುವಿನ ಕಳ್ಳಿಯ ಬಗ್ಗೆ ಈವರೆಗೂ ಸುಳಿವು ಸಿಕ್ಕಿಲ್ಲ. ಮಗು ಕಳೆದುಕೊಂಡಿರುವ ದಂಪತಿ ನ್ಯಾಯಕ್ಕಾಗಿ ಅಂಗಲಾಚಿದ್ದರೂ ವರ್ಷ ಕಳೆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.