ಚಿಕ್ಕಮಗಳೂರು: ಅಸಭ್ಯ ವರ್ತನೆ ತೋರಿ, ಜೀವ ಬೆದರಿಕೆ ಹಾಕಿದ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು 4 ವರ್ಷದ ಮಗುವಿನೊಂದಿಗೆ ಮಧ್ಯರಾತ್ರ್ರಿ 1 ಗಂಟೆವರೆಗೂ ಠಾಣೆಯಲ್ಲಿ ಪ್ರತಿಭಟಿಸಿದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕುದುರೆಮುಖದಲ್ಲಿ (Kudremukha) ನಡೆದಿದೆ.
ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯ ಸಂಸೆ ಗ್ರಾಮದ ಮಹಿಳೆಯೊಬ್ಬರು ಪಕ್ಕದ ಮನೆಯ ಯುವಕರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಅಲ್ಲದೆ ಪತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಎರಡು ದಿನದ ಹಿಂದೆ ದೂರು ನೀಡಲು ಠಾಣೆಗೆ ಬಂದಿದ್ದರು. ಅಲ್ಲದೆ ಅಸಭ್ಯವಾಗಿ ವರ್ತಿಸಿದ ಯುವಕರ ವೀಡಿಯೋವನ್ನು ಪೊಲೀಸರಿಗೆ ನೀಡಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಮಗುವಿಗೆ ಊಟ ಮಾಡಿಸಿ ಠಾಣೆಯಲ್ಲಿಯೇ ಮಲಗಿಸಿದ್ದಾರೆ. ಇದನ್ನೂ ಓದಿ: ನಿನ್ನ ಅಂತ್ಯ ನಿಶ್ಚಿತ – ಸಾಹಿತಿ ಬಂಜಗೆರೆ ಜಯಪ್ರಕಾಶ್‍ಗೆ ಜೀವ ಬೆದರಿಕೆ
Advertisement
Advertisement
ಮಹಿಳೆಯ ಪ್ರತಿಭಟನೆಗೆ ಮಣಿದ ಪೊಲೀಸರು ಮಧ್ಯರಾತ್ರಿ ಯುವಕರ ವಿರುದ್ಧ ಎಫ್‍ಐಆರ್ (FIR) ದಾಖಲಿಸಿದ್ದಾರೆ. ಮಹಿಳೆಯ ಪಕ್ಕದ ಮನೆಯ ಯುವಕರಾದ ನವೀನ್, ಶ್ರೇಯಾಂಶ್ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: 10 ಜನ ದಲಿತರ ಹತ್ಯೆಗೈದಿದ್ದ ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್