ಮಡಿಕೇರಿ: ಕುವೈತ್ (Kuwait) ನಲ್ಲಿ ಗೃಹ ಬಂಧನದಲ್ಲಿದ್ದ ಕೊಡಗು (Kodagu) ಮೂಲದ ಮಹಿಳೆ ಕೊನೆಗೂ ಬಂಧ ಮುಕ್ತರಾಗಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ (Virajpete) ತಾಲೂಕಿನ ಕರಡಿಗೋಡು ನಿವಾಸಿಯಾದ ಪಾರ್ವತಿ ಎಂಬ ಮಹಿಳೆ ಕುವೈತ್ ದೇಶಕ್ಕೆ ಕೆಲಸಕ್ಕೆಂದು ಏಜೆಂಟ್ ಮುಖಾಂತರ ತೆರಳಿದ್ದರು. ಈ ವೇಳೆ ಅವರನ್ನು ಅಲ್ಲಿಯ ಏಜೆಂಟ್ ಕೂಡಿ ಹಾಕಿದ್ದರು. ಕೊಡಗು ಜಿಲ್ಲಾಡಳಿತಕ್ಕೆ ಈ ಬಗ್ಗೆ ದೂರು ಸ್ವೀಕೃತವಾದ ಕೂಡಲೇ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ಅವರಿಗೆ, ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ ಕರೆ ತರುವ ಜವಾಬ್ದಾರಿ ವಹಿಸಿದ್ದರು.
Advertisement
Advertisement
ಜಿಲ್ಲಾಡಳಿತ ಸಂತ್ರಸ್ತ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿ, ಅವರಿದ್ದ ಸ್ಥಳವನ್ನು ಗುರುತಿಸಿ ಕುವೈತ್ ಅಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. ನಿರಂತರ ಸಂಪರ್ಕವನ್ನು ಸಾಧಿಸಿ ಸತತ ಪ್ರಯತ್ನದ ಮೂಲಕ ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಕೊಡಗು ಜಿಲ್ಲಾಡಳಿತ ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ ಭಾರತಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದೆ.
Advertisement
ಇಂದು ಬೆಳಗ್ಗೆ ಸಂತ್ರಸ್ತ ಮಹಿಳೆ ಚೆನ್ನೈಗೆ ತಲುಪಿದ್ದಾರೆ. ಅಲ್ಲಿಂದ ಕೊಡಗಿಗೆ ಬರುತ್ತಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಜೀವಂತ ಇದ್ದಾಗಲೇ ಬಿಜೆಪಿ ಸೇರಿಸಲ್ಲ, ಇನ್ನು ಅವರ ಹೆಣ ಇಟ್ಕೊಂಡು ಏನು ಮಾಡ್ಲಿ?: ಕೆ.ಎಸ್ ಈಶ್ವರಪ್ಪ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k