ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು (Women) ಆಕರ್ಷಕವಾಗಿ ಕಾಣಬೇಕು ಅಂತಾ ಬ್ಯೂಟಿ ಬಗ್ಗೆ ಕೇರ್ (Beauty Care) ಮಾಡೋದು ಜಾಸ್ತಿ. ಊಟ ಇಲ್ಲದಿದ್ರೂ ಸರಿ, ಟೈಂ ಟು ಟೈಂ ಮೇಕಪ್ ಮಾತ್ರ ಪಕ್ಕಾ ಆಗ್ಬೇಕು. ಕೆಲವರಂತೂ ವಿತೌಟ್ ಮೇಕಪ್ (Makeup) ಮನೆಯಿಂದ ಕಾಲಿಡೋ ಹಾಗೇ ಇಲ್ಲ. ಪ್ರಪಂಚವೇ ಮುಳುಗಿ ಹೋಯ್ತೇನೊ ಅನ್ನೂ ಹಾಗೇ ಕೂತಿರ್ತಾರೆ. ಇದೆಲ್ಲವೂ ಇಂದು ಸಹಜವಾಗಿಬಿಟ್ಟಿದೆ.
Advertisement
ಆದ್ರೆ ಇಲ್ಲಿ ಓರ್ವ ಮಹಿಳೆ ತನ್ನ ಗಂಡನಿಗೆ ವಿಚ್ಛೇದನ (Divorce) ನೀಡಲು ಕೋರ್ಟ್ (Court) ಮೆಟ್ಟಿಲೇರಿದ್ದಾಳೆ. ಆಕೆ ನೀಡಿದ ಕಾರಣ ಕೇಳಿದ್ರೆ ಜನರು ಬೆಚ್ಚಿ ಬೀಳ್ತಾರೆ. ಹೌದು. ತನ್ನ ಪತಿ ಬ್ಯೂಟಿಪಾರ್ಲರ್‌ಗೆ (Beauty Parlor) ಹೋಗಲು ಎಷ್ಟು ಕೇಳಿದ್ರೂ ಹಣ ಕೊಡ್ತಾ ಇಲ್ಲ ಅಂತಾ ಡಿವೋರ್ಸ್‌ಗೆ ಅಪ್ಲೇ ಮಾಡಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ
Advertisement
Advertisement
ಸಿವಿಲ್ ಲೈನ್ ಪ್ರದೇಶದಲ್ಲಿ ವಾಸವಿರುವ 25 ವರ್ಷದ ಗೃಹಿಣಿ ದೆಹಲಿ ನಿವಾಸಿ ಅಮಿತ್ ಎಂಬಾತನನ್ನು 2015ರಲ್ಲಿ ವಿವಾಹವಾಗಿದ್ದರು. ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಲವಲವಿಕೆಯಿಂದ, ಖುಷಿಖುಷಿಯಾಗಿ ಇದ್ದರು. ಆದರೆ 3 ವರ್ಷಗಳ ಹಿಂದೆ ಇವರಿಬ್ಬರ ನಡುವೆ ಕಲಹ ಶುರುವಾಯಿತು. ನಂತರದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ದಂಪತಿಗೆ ಇನ್ನೂ ಮಕ್ಕಳು ಆಗಿಲ್ಲ.
Advertisement
ಇದೀಗ ಮೇಕಪ್ ವಿಷಯಕ್ಕಾಗಿ ವಿಚ್ಛೇದನಕ್ಕೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇವರನ್ನು ನ್ಯಾಯಾಲಯದಲ್ಲಿ ಕೌನ್ಸೆಲಿಂಗ್‌ಗೆ ಕರೆಯಲಾಗಿದೆ ಎಂದು ನ್ಯಾಯಾಲಯದ ಸಲಹೆಗಾರ ಪ್ರದೀಪ್ ಸಾರಸ್ವತ್ ಹೇಳಿದ್ದಾರೆ. ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಿರಾತಕರ ಗ್ಯಾಂಗ್