ಬೆಂಗಳೂರು: ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ (Fair) ಕೊಂಡ ಹಾಯುವಾಗ ಮಹಿಳೆ (Woman) ಬಿದ್ದು, ಗಂಭೀರ ಗಾಯವಾದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ನಡೆದಿದೆ.
ದೇವಸ್ಥಾನದ ಅರ್ಚಕಿ ಅನುಜೋಗತಿಯಮ್ಮ ಕೊಂಡದಲ್ಲಿ ಬಿದ್ದ ಮಹಿಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಶಾಂತಿನಗರದ ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೊತ್ಸವದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಕಳೆದ ರಾತ್ರಿ ದೇವಿಗೆ ಪೂಜೆ ಸಲ್ಲಿಸಿ ಆರತಿ ಮೂಲಕ ಕೊಂಡಹಾಯುವ ಪದ್ಧತಿ ಆಚರಣೆಯಿದೆ. ಈ ಹಿನ್ನೆಲೆಯಲ್ಲಿ ಕೊಂಡಹಾಯುವಾಗ ಅನುಜೋತಿಯಮ್ಮ ಕೊಂಡದಲ್ಲಿ ಬಿದ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಬೆಕ್ಕುಗಳ ಕಾಟ- ಬೆಕ್ಕಿಗೂ ಸಂತಾನಹರಣ ಚಿಕಿತ್ಸೆ ಮಾಡಲು ಮನವಿ
Advertisement
Advertisement
ಕಳಸ ಹೊತ್ತು ಕೊಂಡದಲ್ಲಿ ನಡೆಯುವಾಗ ಕೊಂಡಕ್ಕೆ ಬಿದ್ದು ಅನುಜೋಗತಿಯಮ್ಮನಿಗೆ ಗಂಭೀರವಾದ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಾಗಿದ್ದು, ಸುಟ್ಟಗಾಯಗಳಿಗೆ ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಮೇಲೆ ಹಲ್ಲೆ ಮಾಡಿ 2 ಕೈಗಳನ್ನು ಕತ್ತರಿಸಿ ಕೊಂಡೊಯ್ದ ದುಷ್ಕರ್ಮಿಗಳು
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k