ಆಸ್ತಿ ವಿವಾದ- ಸಲಾಕೆಯಿಂದ ಹೊಡೆದು ಅತ್ತಿಗೆಯನ್ನು ಹತ್ಯೆಗೈದ ಮೈದುನ

Public TV
1 Min Read
gadaga murder

ಗದಗ: ಆಸ್ತಿ ವಿವಾದ ಹಿನ್ನೆಲೆ,  ಅತ್ತಿಗೆಯನ್ನು ಮೈದುನ ಸಲಾಕೆಯಿಂದ ಹೊಡೆದು ಕೊಲೆಗೈದ ಘಟನೆ ಗದಗ (Gadaga) ತಾಲೂಕಿನ ಕಣವಿ ಗ್ರಾಮದಲ್ಲಿ ನಡೆದಿದೆ.

ಜೈಬುನಿಸಾ ಮಾಚೇನಹಳ್ಳಿ(56) ಮೃತ ಮಹಿಳೆ. ಮಲ್ಲಿಕಸಾಬ್ ಕಿಲ್ಲೆದಾರ್ ಮಹಿಳೆಯನ್ನು ಕೊಲೆಗೈದ ಮೈದುನ.

ಸಹೋದರರ ಆಸ್ತಿ ಸಂಬಂಧ ನಡೆದ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮೈದುನ ಸಲಾಕೆಯಿಂದ ಮಹಿಳೆ ತಲೆಗೆ ಹೊಡೆದಿದ್ದಾನೆ. ಕೂಡಲೆ ಆಕೆಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಜೈಬುನಿಸಾ ಸಾವನ್ನಪ್ಪಿದ್ದಾಳೆ. ಹಲ್ಲೆ ನಡೆಸಿದ ಬಳಿಕ ಮಲ್ಲಿಕಸಾಬ್ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.ಇದನ್ನೂ ಓದಿ: ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ನಡೆಸಿದ ಖ್ಯಾತ ಗಾಯಕ ಸಂಜಯ್ ಚಕ್ರವರ್ತಿ ಅರೆಸ್ಟ್

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗದಗ ತಾಲೂಕಿನ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ 900 ಕೋಟಿ ಮೌಲ್ಯದ ಕೊಕೇನ್‌ ವಶ – ಇಬ್ಬರು ಅರೆಸ್ಟ್‌

Share This Article