ಚಿಕ್ಕೋಡಿ: ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (GruhaLakshmi Scheme) ಹಣದಿಂದ ಬೈಕ್ ಖರೀದಿ, ವ್ಯಾಪಾರ ಆರಂಭ ಸೇರಿದಂತೆ ಅನೇಕರು ಲಾಭ ಪಡೆದಿದ್ದಾರೆ. ಆದರೆ ಇಲ್ಲೋರ್ವ ಮಹಿಳೆ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಜಿಲ್ಲೆಯ ರಾಯಭಾಗ (Rayabhaga) ತಾಲೂಕಿನ ಮಂಟೂರಿನಲ್ಲಿ ಗ್ರಂಥಾಲಯ ಸ್ಥಾಪಿಸಿ ಮಾದರಿಯಾಗಿದ್ದಾರೆ.
ಮಂಟೂರು (Manturu) ಗ್ರಾಮದ ನಿವಾಸಿಯಾದ ಮಲ್ಲವ್ವ ಮೇಟಿ, ಮಂಟೂರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ಗೃಹಲಕ್ಷ್ಮೀ ಯೋಜನೆಯ 13 ಕಂತುಗಳ ಹಣದಿಂದ ಚಿಕ್ಕ ಕೋಣೆಯಲ್ಲಿ ಸುಸಜ್ಜಿತವಾಗಿ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ.ಇದನ್ನೂ ಓದಿ: ದಾಖಲೆ ತೋರಿಸಿದ್ರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ: ಸಿ.ಟಿ ರವಿ
Advertisement
Advertisement
ಕೇವಲ ಗೃಹಲಕ್ಷ್ಮೀ ಹಣದಿಂದ ಮಾತ್ರವಲ್ಲ, ತಮಗೆ ಬರುವ ಆದಾಯದ ಹಣವನ್ನು ಸೇರಿಸಿ, ಒಂದು ಲಕ್ಷ ರೂ. ಖರ್ಚು ಮಾಡಿ ಗ್ರಂಥಾಲಯ ನಿರ್ಮಿಸಿದ್ದಾರೆ.
Advertisement
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಧಾರವಾಡ, ಬೆಂಗಳೂರು ನಗರಗಳಿಗೆ ತೆರಳಿ ಗ್ರಾಮೀಣ ಭಾಗದ ಯುವಜನತೆ ಸಾವಿರಾರು ರೂ. ಹಣವನ್ನು ಖರ್ಚು ಮಾಡುತ್ತಾರೆ. ಗ್ರಂಥಾಲಯದಿಂದ ಯುವಜನತೆಗೆ ಹಣದ ಖರ್ಚು ಕಡಿಮೆಯಾಗುತ್ತದೆ ಎನ್ನುವ ಸದುದ್ದೇಶದಿಂದ ಗ್ರಂಥಾಲಯ ಸ್ಥಾಪಿಸಿ ನೆರವಾಗಿದ್ದಾರೆ. ನೆರವಾಗಲು ಸಹಾಯ ಮಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Advertisement
ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಂದ ಯಾವುದೇ ಹಣ ಪಡೆಯದೇ ಉಚಿತವಾಗಿ ಪುಸ್ತಕಗಳನ್ನು ಓದಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕೇವಲ ಮಲ್ಲವ್ವ ಅವರು ಮಾತ್ರವಲ್ಲದೇ ಅವರ ಕುಟುಂಬದವರು ಕೂಡ ಇದಕ್ಕೆ ಸಹಕಾರಿಯಾಗಿದ್ದಾರೆ.ಇದನ್ನೂ ಓದಿ: ಬಿಷ್ಣೋಯ್ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ