ಹೆದರಿ ಬಂಕರ್‌ನಲ್ಲಿ ಕುಳಿತಿದ್ದೆವು, ರಸ್ತೆಗೆ ಇಳಿಯಲ್ಲ – ಇರಾನ್ ದಾಳಿಯ ಭೀಕರತೆ ಬಿಚ್ಚಿಟ್ಟ ಕರ್ನಾಟಕದ ಮಹಿಳೆ

Public TV
1 Min Read
Iran Isrel Conflict

– ರಾಶಿ ರಾಶಿ ಡ್ರೋನ್, ಕ್ಷಿಪಣಿಗಳಿಂದ ದಾಳಿ

ಟೆಲ್ ಅವೀವ್: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವೆ ಸಂಘರ್ಷ ಉಂಟಾಗಿ, ದಾಳಿ-ಪ್ರತಿದಾಳಿಗಳು ನಡೆಸುತ್ತಿದೆ. ಇದೀಗ ಇಸ್ರೇಲ್‌ನಲ್ಲಿ ಸಿಲುಕಿರುವ ಕರ್ನಾಟಕದ ಮಹಿಳೆಯೊಬ್ಬರು ಇರಾನ್ ದಾಳಿಯ ಭೀಕರತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇಸ್ರೇಲ್‌ನಲ್ಲಿ ಕೇರ್ ಟೇಕರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಗಳೂರಿನ ಮಹಿಳೆಯೊಬ್ಬರು, ಪಬ್ಲಿಕ್ ಟಿವಿಯೊಂದಿಗೆ ದಾಳಿ ಭೀಕರತೆಯನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಇಂದು ಬೆಳಗ್ಗೆ ಕೂಡಾ ಡ್ರೋನ್, ಮಿಸೈಲ್ ಅಟ್ಯಾಕ್ (Missile attack) ಆಗಿದೆ. ಇಲ್ಲಿನ ಒಂದೊಂದು ಕ್ಷಣವೂ ಭಯದಿಂದ ಕೂಡಿದೆ. ರಾಶಿ, ರಾಶಿ ಡ್ರೋನ್, ಮಿಸೈಲ್‌ಗಳಿಂದ ದಾಳಿ ನಡೆಯುತ್ತಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Israel-Iran Conflict | ಇಸ್ರೇಲ್‌ನಲ್ಲಿ ಸಿಲುಕಿದ 18 ಮಂದಿ ಕನ್ನಡಿಗರು

ರಸ್ತೆಗಳಿಗೆ ಇಳಿಯಲು ಭಯ ಆಗ್ತಿದೆ. ಜೆರುಸೇಲಂನಲ್ಲಿ 2 ದಿನಗಳಿಂದ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಕಚೇರಿ, ಕಾರ್ಖಾನೆಗಳಿಗೆ ರಜೆ ನೀಡಲಾಗಿದೆ. ಅಧಿಕಾರಿಗಳು, ರಸ್ತೆಗೆ ಇಳಿಯದಂತೆ ನಾಗರಿಕರಿಗೆ ಸೂಚನೆ ನೀಡಿದ್ದಾರೆ. ಜೇರುಸೇಲಂನ ಹಲವು ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗ್ತಿದೆ. ಸೈರನ್ ಮೊಳಗ್ತಿದ್ದಂತೆ ಬಂಕರ್‌ಗೆ ಜನರು ಓಡಿ ಹೋಗುತ್ತಿದ್ದಾರೆ ಎಂದು ಇರಾನ್ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್‌, ಇಸ್ರೇಲ್‌ನಲ್ಲಿ 80 ಮಂದಿ ಸಾವು

ತುರ್ತು ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಯಾವುದೇ ಸಂಚಾರ ಅನುಮತಿ ಇಲ್ಲ. ಟೆಲ್ ಅವೀವ್, ಬೆತ್ಲಹೆಂನಲ್ಲಿ ಮನೆಗಳಿಗೆ ಹಾನಿ ಆಗಿದೆ. ಜೆರುಸಲೆಂನಲ್ಲಿ ಹಾನಿಯಾಗಿಲ್ಲ. ಆದರೆ ಕ್ಷಿಪಣಿ, ಡ್ರೋನ್ ದಾಳಿಗಳು ನಡೆಯುತ್ತಿವೆ. ರಾತ್ರಿ, ಬೆಳಗ್ಗೆ ಎನ್ನದೇ ದಾಳಿ ನಡೆಯುತ್ತಿದೆ. ಇದರ ಭಯದಲ್ಲಿ ನಮಗೆ ಇಲ್ಲಿ ನಿದ್ದೆ ಇಲ್ಲದಂತಾಗಿದೆ. ಮೊನ್ನೆ ನಡೆದ ಕ್ಷಿಪಣಿ ದಾಳಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ನೋಡಿ ತುಂಬಾ ಭಯ ಆಯ್ತು. ಬಳಿಕ ಬಿಲ್ಡಿಂಗ್ ಕೆಳಗೆ ಇರುವ ಬಂಕರ್‌ಗೆ ಹೋಗಿ ಕುಳಿತಿದ್ದೆವು ಎಂದು ದಾಳಿ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

Share This Article