ಕ್ಯಾನ್ಬೆರಾ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾವುಗಳು ಹುತ್ತದಿಂದ ಹೊರಬರುತ್ತವೆ. ವಾಸಕ್ಕೆ ತಂಪಾದ ಜಾಗಗಳನ್ನೇ ಹುಡುಕುತ್ತವೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮನೆಗಳಿಗೂ ಹೊಕ್ಕಿಬಿಡುತ್ತವೆ.
ಅದೇ ರೀತಿ ಆಸ್ಟ್ರೇಲಿಯಾ (Australia) ಕ್ವೀನ್ಸ್‌ಲ್ಯಾಂಡ್ ನಲ್ಲಿ ಮನೆಯೊಂದಕ್ಕೆ ಹೊಕ್ಕಿದ ಅತ್ಯಂತ ವಿಷಕಾರಿ ಹಾವು (Venomous Snake) ನುಗ್ಗಿದ್ದು, ಮಹಿಳೆಯ ಬೆಡ್‌ರೂಮ್ ಹಾಸಿಗೆಯಲ್ಲೇ ಮಲಗಿದ್ದ ದೃಶ್ಯ ಕಂಡುಬಂದಿದೆ. ಹಾವು ಸುಮಾರು 6 ಅಡಿ ಉದ್ಧ ಇತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್ ಮಾಡಿದ ಉಗಾಂಡ
Advertisement
Advertisement
ತನ್ನ ಹಾಸಿಗೆ ಮೇಲೆ ಮಲಗಿದ್ದ ಹಾವನ್ನು ಕಂಡೊಡನೆ ಮಹಿಳೆ ಎದ್ನೋ ಬಿದ್ನೋ ಅಂತಾ ಓಡಿಬಂದಿದ್ದಾಳೆ. ತಕ್ಷಣ ಬಾಗಿಲು ಹಾಕಿಕೊಂಡು ಹಾವು ಹೊರಕ್ಕೆ ಹೋಗದಂತೆ ತಡೆದಿದ್ದಾಳೆ. ಬಾಗಿಲು ಸಂದಿಯನ್ನು ಟವೆಲ್‌ನಿಂದ ಮುಚ್ಚಿದ್ದಾಳೆ. ನಂತರ ಸ್ಥಳೀಯ ಉರಗ ರಕ್ಷಕರೊಬ್ಬರಿಗೆ ಕರೆ ಮಾಡಿ ಬರಲು ಹೇಳಿದ್ದು, ಹಾವನ್ನು ರಕ್ಷಣೆ ಮಾಡಿದ ನಂತರ ಮಹಿಳೆ ತನ್ನ ರೂಮಿಗೆ ಪ್ರವೇಶ ಮಾಡಿದ್ದಾಳೆ.
Advertisement
Advertisement
ಈ ಫೋಟೋವನ್ನು ಉರಗ ರಕ್ಷಕ ಜಾಲತಾಣದಲ್ಲೂ ಹಂಚಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ದೆಹಲಿ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪ – 9 ಮಂದಿ ಸಾವು