ಬೆಂಗಳೂರು: 25 ಅಡಿ ಆಳದ ಗುಂಡಿಗೆ ಬಿದ್ದು ಮಹಿಳೆ 8 ಗಂಟೆಗಳ ಪರದಾಡಿದ ಘಟನೆ ನಗರದ ನಾಗರಭಾವಿ ಸರ್ಕಲ್ ಬಳಿ ನಡೆದಿದೆ.
ಪರಿಮಳ (56) ಎಂಬವರು ವಾಕಿಂಗ್‌ಗೆ ಹೋಗಿದ್ದಾಗ ಗುಂಡಿಗೆ ಬಿದ್ದಿದ್ದರು. ಸುಮಾರು 8 ಗಂಟೆಗಳ ಕಾಲ ಗುಂಡಿಯಲ್ಲೇ ಪರದಾಡಿದ್ದರು. ಅಂಡರ್‌ಪಾಸ್ ಕಾಮಗಾರಿಗೆ ಅಂತ ಜಿಬಿಎ ತೆಗೆದಿದ್ದ ಗುಂಡಿಗೆ ಬಿದ್ದು ಅಸ್ವಸ್ಥಗೊಂಡಿದ್ದರು.
ತಾಯಿ ಮನೆಗೆ ಬಾರದಿದ್ದಕ್ಕೆ ಪುತ್ರ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. 8 ಗಂಟೆಗಳ ಬಳಿಕ ಮಹಿಳೆ ಫೋನ್ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಲೊಕೇಷನ್ ಟ್ರೇಸ್ ಮಾಡಿ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಿದ್ದಾರೆ.
ಗುಂಡಿಯೊಳಗೆ ಹಗ್ಗೆ ಬಿಟ್ಟು ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯ ಮಹಿಳೆಗೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗುಂಡಿಗೆ ಬಿದ್ದ ಮಹಿಳೆಯ ಮಗ ಸುಮಂತ್ ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯಿಸಿ, ಗುಂಡಿಗೆ ಹೇಗೆ ಬಿದ್ರೂ ಅನ್ನೋದೆ ಗೊತ್ತಾಗಿಲ್ಲ. ಬಿದ್ದ ಬಳಿಕ ಪ್ರಜ್ಞೆ ಬಂದಿಲ್ಲ. ಫೋನ್ ಕೂಡ ಕನೆಕ್ಟ್ ಆಗಿಲ್ಲ. ಒಮ್ಮೆ ಫೋನ್ ಕನೆಕ್ಟ್ ಆದಾಗ ನಾಗರಭಾವಿ ಹತ್ತಿರ ಮೋರಿಯಲ್ಲಿ ಬಿದ್ದಿದ್ದಿನಿ ಅಂದ್ರು. ನಾಲ್ಕೈದು ಕಡೆ ಮೋರಿಗಳಲ್ಲಿ ಹುಡುಕಾಡಿದ್ವಿ ಸಿಗಲಿಲ್ಲ. ಲೊಕೇಷನ್ ಕೂಡ ಕಳಿಸೋಕೆ ಆಗಿಲ್ಲ. ಮಧ್ಯಾಹ್ನ ಮನೆ ಬಿಟ್ಟವರು ಮಧ್ಯರಾತ್ರಿ ತನಕ ಹುಡುಕಾಟ ನಡೆಸಿದ್ವಿ. ರಾತ್ರಿ ಹುಡುಕಾಡುವಾಗ ರಾತ್ರಿ ಗಸ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ವಿ. ಕೂಡಲೇ ತಾಯಿಯ ಫೋನ್ ನಂಬರ್‌ನಿAದ ಲೊಕೇಷನ್ ಟ್ರೇಸ್ ಮಾಡಿದ್ರು. ಲೊಕೇಷನ್ ಟ್ರೇಸ್ ಮಾಡಿ ಗುಂಡಿಯ ಬಳಿ ಬಿದ್ದಿರೋದನ್ನ ಪತ್ತೆ ಹಚ್ಚಿದ್ರು ಎಂದು ಘಟನೆ ಬಗ್ಗೆ ವಿವರಿಸಿದರು.
ಅಮ್ಮನ ಬೆನ್ನು, ಪಕ್ಕೆಲುಬು, ತಲೆಗೆ ಗಾಯ ಆಗಿದೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಬಿಎ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನ ಪಾಲಿಸಬೇಕು. ಸೈನ್‌ಬೋರ್ಡ್ ಹಾಕಿಲ್ಲ. ಬ್ಯಾರಿಕೇಡ್ ಕೂಡ ಹಾಕಿಲ್ಲ ಎಂದು ಆಕ್ರೋಶ ಹೊರಹಾಕಿದರು.

