ಕಲಬುರಗಿ: ಮಹಿಳೆಯೊಬ್ಬರು ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಜಯಶ್ರೀ ನಾಯಕ ಎಂಬವರು ಬೆಂಗಳೂರು-ಮುಂಬೈ-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ರಾಯಚೂರಿನಿಂದ ಸೊಲ್ಲಾಪುರರಕ್ಕೆ ಹೊರಟಿದ್ದ ವೇಳೆ ಘಟನೆ ನಡೆದಿದೆ.
ಮೂಲತಃ ರಾಯಚೂರು ಜಿಲ್ಲೆಯ ಖಾನಾಪೂರ ನಿವಾಸಿಯಾಗಿರುವ ಜಯಶ್ರೀ ಅವರು ಬೆಂಗಳೂರು-ಮುಂಬೈ-ಚೆನ್ನೈ ಎಕ್ಸ್ ಪ್ರೆಸ್ ರೈಲಿನಲ್ಲಿ ರಾಯಚೂರಿನಿಂದ ಸೊಲ್ಲಾಪುರಕ್ಕೆ ಹೊರಟಿದ್ದರು. ಈ ವೇಳೆ ವಾಡಿ ರೈಲು ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ಮಹಿಳೆಯರು ಮತ್ತು ಚೈಲ್ಡ್ ಹೆಲ್ಪ್ ಲೈನ್ ನೆರವಿನಿಂದ ರೈಲ್ವೇ ನಿಲ್ದಾಣದಲ್ಲೇ ಹೆರಿಗೆ ಮಾಡಿಸಿದ್ದಾರೆ.
ಸದ್ಯ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.