ಮಚ್ಚಿನಿಂದ ಕೊಚ್ಚಿ ಹಾಕಿ, ಬೆಂಕಿ ಹಚ್ಚಿ ಮಹಿಳೆ ಹತ್ಯೆಗೆ ಯತ್ನ

Advertisements

ಮಂಡ್ಯ: ಪ್ರವಾಸಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ವ್ಯಕ್ತಿಯೋರ್ವ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ,  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈಯ್ಯಲು ಯತ್ನಿಸಿರುವ ಘಟನೆ ನಾಗಮಂಗಲದ ಗೆಳತಿ ಗುಡ್ಡದಲ್ಲಿ ನಡೆದಿದೆ.

Advertisements

ಮಹಿಳೆ ಪತಿ ಕಳೆದ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಹೀಗಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಊರಿನಲ್ಲಿಯೇ ಬಿಟ್ಟು ಮಹಿಳೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಬೆಂಗಳೂರಿನ ಗೊಲ್ಲರಹಟ್ಟಿಯ ಬಸವರಾಜು ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಬಸವರಾಜು ಗಾರೆ ಕೆಲಸದ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ಕೆಲ ತಿಂಗಳ ಹಿಂದೆ ನಾನು ಊರಿಗೆ ಹೋಗುತ್ತೇನೆ ಎಂದು ಹೇಳಿದಾಗ ಬಸವರಾಜು ಆಕೆಗೆ ಊರಿನಲ್ಲಿಯೇ ಒಂದು ಮನೆ ಮಾಡಿಕೊಟ್ಟಿರುತ್ತಾನೆ. ಇದನ್ನೂ ಓದಿ: ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ

Advertisements

ಕಳೆದ ಗುರುವಾರ ಬಸವರಾಜು ಬೈಕ್‍ನಲ್ಲಿ ಮಹಿಳೆಯನ್ನು ಕರೆದುಕೊಂಡು ಮಹದೇಶ್ವರ ಬೆಟ್ಟ ಸೇರಿದಂತೆ ಹಲವು ಸ್ಥಳಗಳಿಗೆ ಹೋಗಿ ಸುತ್ತಾಡಿಕೊಂಡು ಬಂದಿದ್ದಾನೆ. ನಂತರ ಮೈಸೂರಿನಲ್ಲಿ ಎರಡು ದಿನಗಳ ಕಾಲ ಲಾಡ್ಜ್‍ವೊಂದರಲ್ಲಿ ಇಬ್ಬರು ತಂಗಿದ್ದರು. ಆದರೆ ಭಾನುವಾರ ನಾಗಮಂಗಲದ ಸೂಳೆಕೆರೆ ಸಮೀಪವಿರುವ ಗೆಳತಿ ಗುಡ್ಡಕ್ಕೆ ಇಬ್ಬರು ಹೋಗಿದ್ದಾರೆ. ಅಲ್ಲದೇ ದಾರಿಯ ಮಧ್ಯದಲ್ಲಿ ತಿಂಡಿ ಹಾಗೂ ಪೆಟ್ರೋಲ್‍ನ್ನು ಸಹ ತೆಗೆದುಕೊಂಡಿದ್ದಾರೆ.

ಗೆಳತಿ ಗುಡ್ಡಕ್ಕೆ ತಲುಪಿದ ಬಳಿಕ ತಿಂಡಿ ತಿನ್ನುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಕೆಳಕ್ಕೆ ಬಿದ್ದು ಒದ್ದಾತ್ತದ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಿಂದ ನರಳಾಡಿಕೊಂಡು ರಸ್ತೆ ಬಳಿ ಬಂದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ರೆಸ್ಟೋರೆಂಟ್‍ನಲ್ಲಿ ಯುವತಿಯರನ್ನು ಧರಧರನೇ ಎಳೆದು ಹಲ್ಲೆ ನಡೆಸಿದ ಗ್ಯಾಂಗ್

Advertisements

ಬಸವರಾಜು ಮಹಿಳೆಗೆ ಮೂರು ಲಕ್ಷ ಹಣ ಕೊಡಬೇಕಿತ್ತು. ಈ ಕಾರಣಕ್ಕೆ ಕೃತ್ಯ ಎಸಗಿದ್ದಾನೆ ಎಂದು ಮಹಿಳೆಯ ಸಂಬಂಧಿಕರು ಹೇಳಿದ್ದಾರೆ. ಇನ್ನೊಂದೆಡೆ ಪ್ರಭಾ ಬೇರೆಯೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರಿಂದ ಹೀಗೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

Advertisements
Exit mobile version