ಹಾಸನ: ಜೀಪ್ ರೇಸ್‍ಗೆ ಬಂದಿದ್ದ ಕೇರಳ (Kerala) ಮೂಲದ ವ್ಯಕ್ತಿಯನ್ನು ದೈತ್ಯ ಒಂಟಿ ಸಲಗವೊಂದು (Elephant) ಅಟ್ಟಾಡಿಸಿದ ಘಟನೆ ಸಕಲೇಶಪುರದ (Sakleshpura) ಬೆಳ್ಳೂರು ಗ್ರಾಮದ ಹೊಳೆಸಾಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಆನೆಗಳು ಓಡಾಡುವ ಸ್ಥಳದಲ್ಲಿ ಹತ್ತಕ್ಕೂ ಹೆಚ್ಚು ಜೀಪ್‍ಗಳಿಂದ ರೇಸ್ ಆಯೋಜಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಸಲಗ ದಿಢೀರ್ ಎಂಟ್ರಿ ಕೊಟ್ಟಿದೆ. ಅಲ್ಲೇ ಇದ್ದ ವ್ಯಕ್ತಿಯನ್ನು ಆನೆ ಅಟ್ಟಾಡಿಸಿದೆ. ಅಲ್ಲದೇ ಸೊಂಡಲಿನಿಂದ ಎತ್ತಿ ಎಸೆಯಲು ಯತ್ನಿಸಿದೆ. ಈ ವೇಳೆ ಜೋರಾಗಿ ಕೂಗಾಡುತ್ತಾ ಜೀಪ್‍ಗಳನ್ನು ಆನೆಯ ಹತ್ತಿರ ಕೊಂಡೊಯ್ದಿದ್ದು, ಆನೆ ಅಲ್ಲಿಂದ ತೆರಳಿದೆ. ಇದನ್ನೂ ಓದಿ: ಇದೇ ಮೊದಲು – ಭಾರತದ ಸೇನಾ ಬತ್ತಳಿಕೆಗೆ ಲೇಸರ್ ಅಸ್ತ್ರ, ಪ್ರಯೋಗ ಯಶಸ್ವಿ
ಕಾಡಾನೆ ದಾಳಿಯಿಂದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆನೆ ದಾಳಿಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡಗಿಸುವಂತಿದೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಡಿನ ಭಾಗದಲ್ಲಿ ಜೀಪ್ ರೇಸ್ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳದೇ ಇರುವುದಕ್ಕೆ, ಅರಣ್ಯ ಇಲಾಖೆ (Forest Department) ಹಾಗೂ ಕಂದಾಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಸಮರ – ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ