Districts
ಪತಿಯ ಕಿರುಕುಳಕ್ಕೆ ಮನನೊಂದು ಮಗಳ ಜೊತೆ ಆತ್ಮಹತ್ಯೆಗೆ ಶರಣಾದ ಪತ್ನಿ

ಯಾದಗಿರಿ: ಮನೆಯಲ್ಲಿ ಪತಿಯ ಕಿರುಕುಳದಿಂದಾಗಿ ತನ್ನಿಬ್ಬರ ಮಕ್ಕಳ ಜೊತೆ ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ದುರಂತದಲ್ಲಿ ಅದೃಷ್ಟವಷಾತ್ ಮಗ ನರಸಪ್ಪನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪತ್ನಿ ಅನಿತಾ (28) ಹಾಗು ಮಗಳು ಗೀತಾ (02) ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾರೆ. ಗಾಯಗೊಂಡಿರುವ ನರಸಪ್ಪನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಗುರುಮಿಠಕಲ್ ಪಿಎಸ್‍ಐ ಗುಂಡುರಾವ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇತ್ತ ಗೀತಾರ ಪತಿ ಆನಂದರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
