ದಾವಣಗೆರೆ: ಗಂಡ ಬೇಕು ಎಂದು ಮಕ್ಕಳೊಂದಿಗೆ ಪತ್ನಿ ಧರಣಿ ಕುಳಿತ ಘಟನೆ ದಾವಣಗೆರೆ (Davanagere) ಜಿಲ್ಲೆಯಲ್ಲಿ ನಡೆದಿದೆ.
ನಗರದ ರಾಮನಗರದ ಎಸ್‍ಓಜಿ ಕಾಲೋನಿ ಮನೆ ಮುಂದೆ ಪತ್ನಿ ಸೌಮ್ಯಾ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ರಾತ್ರಿಯಿಂದ ಗಂಡನಿಗಾಗಿ ಕಾಯುತ್ತಿದ್ದಾರೆ. ಕಾನ್ಸ್ ಟೇಬಲ್ ಆಗಿರುವ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತ ಸೌಮ್ಯಾ ಗಂಭೀರ ಆರೋಪ ಮಾಡಿದ್ದಾರೆ.
ಗಂಡ ಗೋಣಿ ಬಸಪ್ಪ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ನಮ್ಮ ಮನೆಗೆ ಬರುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಪತ್ನಿ ಸೌಮ್ಯ ಒಡವೆ ಅಡ ಇಟ್ಟಿದ್ದಾರೆ. ಸದ್ಯ ಅಕ್ರಮ ಸಂಬಂಧ ಹೊಂದಿರುವ ಮಹಿಳೆ ಮನೆ ಮುಂದೆ ರಾತ್ರಿ ಇಡೀ ಇಬ್ಬರು ಮಕ್ಕಳೊಂದಿಗೆ ಗಂಡನಿಗಾಗಿ ಹೆಂಡತಿ ಕಾದು ಕುಳಿತಿದ್ದಾರೆ.
ಸೌಮ್ಯ ಗೋಣಿ ಬಸಪ್ಪ 2013 ರಲ್ಲಿ ವಿವಾಹವಾಗಿದ್ದರು. ಗಂಡ ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ಮನೆ ಖರೀದಿಸಿ ಕೊಟ್ಟಿದ್ದಾನೆ. ನಮ್ಮ ಮನೆಗೆ ಬರುತ್ತಿಲ್ಲ, ಎರಡು ಮಕ್ಕಳ ನಿರ್ವಹಣೆ ಕಷ್ಟ ಆಗಿದೆ. ಈ ಹಿಂದೆ ಕಂಪ್ಲೆಂಟ್ ಕೊಟ್ಟಿದ್ದೆ ಮನವೊಲಿಸಿ ಕೇಸ್ ವಾಪಸ್ ತೆಗೆಸಲಾಗಿತ್ತು. ಇದೀಗ ನನಗೆ ನನ್ನ ಗಂಡ ಬೇಕು ಎಂದು ಪತ್ನಿ ಸೌಮ್ಯ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಡಿಕೆಶಿ ಮುಖ್ಯಮಂತ್ರಿ ಆಗ್ಲೇಬೇಕು, ಆಗಿಯೇ ಆಗ್ತಾರೆ: ಶಾಸಕ ಶಿವಗಂಗಾ ಬಸವರಾಜ್ ವಿಶ್ವಾಸ