ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿದ್ದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಗಂಗಮ್ಮಗುಡಿ ಪೊಲೀಸರು ಬಂಧಿಸಿದ್ದಾರೆ.
ವರಲಕ್ಷ್ಮಿ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಸೆಪ್ಟೆಂಬರ್ 3 ರಂದು ಅನೈತಿಕ ಸಂಬಂಧಕ್ಕೆ ಬಾಬು ಅಡ್ಡಿಯಾಗಿದ್ದಾನೆ ಅಂತ ಹೇಳಿ ವರಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿದ್ದಳು.
ಕುಡಿದು ಬಂದಿದ್ದ ತನ್ನ ಪತಿ ಬಾಬು ಜೊತೆ ವರಲಕ್ಷ್ಮಿ ಜಗಳ ತೆಗೆದು ಹೊರ ಹೋಗಿದ ಬಳಿಕ ಪ್ರಿಯಕರನಿಗೆ ಹೇಳಿ ತನ್ನ ಗಂಡನನ್ನು ಕೊಲೆ ಮಾಡಿಸಿದ್ದಾಳೆ. ನಂತರ ಪೊಲೀಸರಿಗೆ ಪತಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಿದ್ದಳು.
ವರಲಕ್ಷ್ಮಿ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಪೊಲೀಸರು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯವನ್ನು ಬಗ್ಗೆ ಬಾಯಿ ಬಿಟ್ಟಿದ್ದಾಳೆ.