– ಅತ್ತೆ ಮಗಳನ್ನೇ ಕೊಂದು ಈಗ ಪಶ್ಚಾತಾಪ
– ಆರೋಪಿಗೆ 14 ದಿನ ಜೈಲು
ಬೆಂಗಳೂರು: ಹೆಂಡ್ತಿಯನ್ನ ಕೊಂಡು ಪೀಸ್ ಪೀಸ್ ಮಾಡಿ, ತುಂಡರಿಸಿದ ಮೃತದೇಹವನ್ನ ಸೂಟ್‌ಕೇಸ್‌ನಲ್ಲಿಟ್ಟು ಎಸ್ಕೇಪ್ ಆಗಿದ್ದ ಟೆಕ್ಕಿ ಹಂತಕನನ್ನ ಕೊನೆಗೂ ಪೊಲೀಸರು ಬೆಂಗಳೂರಿಗೆ (Bengaluru) ಕರೆ ತಂದಿದ್ದಾರೆ.
ಸ್ವಂತ ಅತ್ತೆ ಮಗಳನ್ನ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದ ಟೆಕ್ಕಿ, ಇದೀಗ ಕೊಲೆ ಮಾಡಿ ಪಶ್ಚಾತ್ತಾಪದಲ್ಲಿದ್ದಾನೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ (Hulimavu Police Station) ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಪತ್ನಿ ಗೌರಿಯನ್ನು ಕೊಂದು ಸೂಟ್ ಕೇಸ್‌ಗೆ ತುಂಬಿದ್ದ ಆರೋಪಿ ಟೆಕ್ಕಿ ರಾಕೇಶ್ ನನ್ನ ನಿನ್ನೆ ರಾತ್ರಿಯೇ ಕೋರಮಂಗಲದ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರು ಪಡಿಸಿದ್ದಾರೆ. ಇದನ್ನೂ ಓದಿ: ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು
ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ ಟೆಕ್ಕಿ ರಾಕೇಶ್. ನಾಳೆ ಓಪನ್ ಕೋರ್ಟ್ ನಲ್ಲಿ ಬಾಡಿ ವಾರೆಂಟ್ ಮೇಲೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಪಡೆಯಲು ಪೊಲೀಸ್ರು ಸಿದ್ಧತೆ ಮಾಡ್ಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!
ಮಹಾರಾಷ್ಟ್ರ ಬಾರ್ಡರ್‌ನಲ್ಲಿ ವಿಷ ಖರೀದಿ
ಕೊಲೆ ಮಾಡಿ ಪುಣೆ ಕಡೆ ಹೋಗ್ತಿದ್ದ ಆರೋಪಿ ಕರ್ನಾಟಕ ಮಹಾರಾಷ್ಟ್ರ ಬಾರ್ಡರ್ ಕಾಗಲ್ ಎಂಬಲ್ಲಿ ವಿಷ ಖರೀದಿಸಿದ್ದ. ಪೆನಾಯಿಲ್ ಮತ್ತು ಜಿರಲೆ ಔಷಧಿಯನ್ನ ಖರೀದಿ ಮಾಡಿಟ್ಟುಕೊಂಡು ಮುಂದೆ ಸಾಗಿದ್ದ. ಶಿರವಾಲ್‌ಗೆ ಹೋಗುವ ದಾರಿಯಲ್ಲಿ ಖಂಬಟ್ಕಿ ಎಂಬಲ್ಲಿ ಕಾರು ನಿಲ್ಲಿಸಿ ವಿಷ ಸೇವನೆ ಮಾಡಿದ್ದ. ವಿಷ ಸೇವಿಸಿದ ಕೂಡಲೇ ಆರೋಗ್ಯದಲ್ಲಿ ಏರು ಪೇರು ಕಂಡುಬಂದಿತ್ತು. ಈತನನ್ನ ನೋಡಿ ಏನಾಯ್ತು ಎಂದು ಕೇಳಿದ ಬೈಕ್ ಸವಾರನಿಗೆ ಕೊಲೆ ಮಾಡಿದ್ದ ಕಥೆ ಹೇಳಿದ್ದ. ಅಲ್ಲದೇ ತಾನು ವಿಷ ಸೇವನೆ ಮಾಡಿರೋದಾಗಿ ಹೇಳಿದ್ದ. ಕೂಡಲೇ ರಾಕೇಶ್ ನನ್ನ ಬೈಕ್ ನಲ್ಲೆ ಆಸ್ಪತ್ರೆಗೆ ದಾಖಲಿಸಿದ್ದ. ಇದನ್ನೂ ಓದಿ: ಆನೇಕಲ್ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್
ಇನ್ನು ಘಟನೆ ಬಗ್ಗೆ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೇಡೆಕರ್ ಹೇಳಿಕೆ ನೀಡಿದ್ದು, ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರ್ಲಿಲ್ಲ. ಮದುವೆ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡ್ಕೊಂಡಿದ್ಲು. ಸ್ವಭಾವತಃ ಗೌರಿ ಜಗಳ ಪ್ರೌವೃತ್ತಿಯವಳಾಗಿದ್ಲು, ಎರಡು ವರ್ಷದ ಹಿಂದೆ ವಿರೋಧದ ನಡುವೆಯೂ ಮದುವೆ ಆಗಿದ್ರು. ಗೌರಿ ಯಾವಾಗಲೂ ನನ್ನ ಮಗ ಮತ್ತು ಕುಟುಂಬಸ್ಥರ ಜೊತೆ ಹಲವು ಬಾರಿ ಜಗಳ ಆಡ್ತಿದ್ಲು. ಗಂಡ-ಹಂಡತಿ ಜಗಳ ಪೊಲೀಸ್ ಠಾಣೆವರೆಗೂ ಹೋಗಿತ್ತು. ರಾಕೇಶ್ ಕೊಲೆ ಮಾಡಿದೀನಿ ಅಂತಾ ಗುರುವಾರ ನನಗೆ ಕಾಲ್ ಮಾಡಿ ಹೇಳಿದ್ದ. ಅಲ್ಲದೇ ತಾನೂ ಕೂಡ ಆತ್ಮಹತ್ಯೆ ಮಾಡ್ಕೊಳ್ತಿದೀನಿ ಅಂತಾ ಹೇಳಿದ್ದ. ನಿನ್ನ ನಿರ್ಧಾರ ತುಂಬಾ ಕಠಿಣವಾಗಿದೆ ಅಂತಾ ನಾನು ಹೇಳಿದ್ದೆ. ಗೌರಿ ತಾಯಿ ಮತ್ತು ಮುಂಬೈನ ಮೆಗವಾಡಿ ಪೊಲೀಸ್ರಿಗೆ ಘಟನೆ ಬಗ್ಗೆ ತಿಳಿಸಿದ್ದೆ. ನಂತರ ಶಿರವಾಲ್ ಪೊಲೀಸ್ರು ಆತನನ್ನ ಪತ್ತೆ ಹಚ್ಚಿದ್ರು ಅಂತಾ ಆರೋಪಿ ರಾಕೇಶ್ ತಂದೆ ರಾಜೇಂದ್ರ ಹೇಳಿಕೆ ನೀಡಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಅತ್ತೆ ಮಗಳನ್ನೇ ಕೊಂದು ಟೆಕ್ಕಿ ಇದೀಗ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾನೆ. ಈತ ಮಾಡಿದ ತಪ್ಪಿಗೆ ಎರಡು ಕುಟುಂಬಗಳು ಪರಿತಪಿಸುವಂತೆ ಮಾಡಿದ್ದಾನೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಗಂಡನ ಹಿಂಸೆ ತಾಳಲಾರದೆ ತವರು ಸೇರಿದ್ದ ಪತ್ನಿ