ಬೆಂಗಳೂರು: ಮದುವೆಯಾಗಿ ಮನೆಯಲ್ಲಿ ಪತ್ನಿ ಇದ್ದರೂ ಗಂಡ ಮಾತ್ರ ತನ್ನ ಆಫೀಸ್ ನಲ್ಲಿಯ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಪತ್ನಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಸಕತ್ ಒದೆ ತಿಂದಿದ್ದಾನೆ.
ಗುರು ಪ್ರಸಾದ್ ಎಂಬಾತನೇ ಪತ್ನಿಯಿಂದ ಥಳಿಸಿಕೊಂಡ ಪತಿರಾಯ. ಗುರುಪ್ರಸಾದ್ ತನ್ನ ಪತ್ನಿ ಉಷಾರ ಕೈಯಲ್ಲಿ ಪ್ರೇಯಸಿಯೊಂದಿಗೆ ಹೋಟೆಲ್ ನಲ್ಲಿ ರೊಮ್ಯಾನ್ಸ್ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಗುರುಪ್ರಸಾದ್ ಖಾಸಗಿ ಕಂಪನಿಯ ನೌಕರನಾಗಿದ್ದು, ತನ್ನದೇ ಕಂಪನಿಯಲ್ಲಿ ಕೆಲಸ ಮಾಡುವ ಜ್ಯೋತಿ ಎಂಬವರ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದನು.
Advertisement
ಕಂಪನಿಯಲ್ಲಿ ತನ್ನ ಪತ್ನಿ ಜ್ಯೋತಿ ಬೇರೊಬ್ಬನೊಂದಿಗೆ ಸಂಬಂಧ ಹೊಂದಿರುವ ವಿಷಯ ತಿಳಿದ ಜ್ಯೋತಿ ಪತಿ ಚೈತನ್ಯ ಡೈವೋರ್ಸ್ ಗೆ ಅಪ್ಲೈ ಮಾಡಿದ್ದಾರೆ. ಜ್ಯೋತಿ ಗಂಡನ ಬಿಟ್ಟು ನನ್ನ ಗಂಡ ಗುರುಪ್ರಸಾದ್ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಅಂತ ಗುರುಪ್ರಸಾದ್ ಪತ್ನಿ ಉಷಾರಿಗೆ ತಿಳಿದಿತ್ತು. ಹೇಗಾದ್ರೂ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿಬೇಕು ಅಂತ ಗುರುಪ್ರಸಾದ್ ಫಾಲೋ ಮಾಡುತ್ತಿದ್ದ ಉಷಾ, ತನ್ನ ಗಂಡ ಮತ್ತು ಜ್ಯೋತಿ ಹೋಟೆಲ್ ಒಳಗೆ ಹೋಗಿ ಜೊತೆಯಲ್ಲಿ ಕೂತು ಲವ್ವಿ ಡವ್ವಿ ಆಡೋದನ್ನ ನೋಡಿದ್ದಾರೆ.
Advertisement
ಗಂಡ ಮತ್ತು ಜ್ಯೋತಿ ಹೊರಗೆ ಬರೋದನ್ನು ಕಾದು ಕುಳಿತಿದ್ದ ಉಷಾ ಇಬ್ಬರಿಗೂ ಚೆನ್ನಾಗಿ ಥಳಿಸಿದ್ದಾರೆ. ಇದೆಲ್ಲಾ ದೃಶ್ಯಗಳು ಹೋಟೆಲ್ ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಹೋಟೆಲ್‍ನ ಹೊರಗೆ ಮಾರಾಮಾರಿ ನಡೆಯಿತೋ ಕೊನೆಗೆ ಉಷಾ, ಜ್ಞಾನಭಾರತಿ ಪೊಲೀಸ್ ಸ್ಟೇಷನ್ ಅಲ್ಲಿ ದೂರು ನೀಡಿದ್ದಾರೆ. ವಿಚಾರ ತಿಳಿದ ಗುರುಪ್ರಸಾದ್ ಮತ್ತು ಜ್ಯೋತಿ ಇಬ್ಬರು ಎಸ್ಕೇಪ್ ಆಗಿದ್ದಾರೆ.