Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಡಿಯೋ: ದಟ್ಟಾರಣ್ಯದ ಮಧ್ಯದಲ್ಲೊಂದು ಜಲಪಾತ- ಮೂಲಸೌಕರ್ಯ, ಪ್ರವಾಸಿಗರಿಗೆ ಮಾಹಿತಿ ಇಲ್ಲದ ಕಾರಣ ನಿರ್ಲಕ್ಷ್ಯ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ವಿಡಿಯೋ: ದಟ್ಟಾರಣ್ಯದ ಮಧ್ಯದಲ್ಲೊಂದು ಜಲಪಾತ- ಮೂಲಸೌಕರ್ಯ, ಪ್ರವಾಸಿಗರಿಗೆ ಮಾಹಿತಿ ಇಲ್ಲದ ಕಾರಣ ನಿರ್ಲಕ್ಷ್ಯ!

Districts

ವಿಡಿಯೋ: ದಟ್ಟಾರಣ್ಯದ ಮಧ್ಯದಲ್ಲೊಂದು ಜಲಪಾತ- ಮೂಲಸೌಕರ್ಯ, ಪ್ರವಾಸಿಗರಿಗೆ ಮಾಹಿತಿ ಇಲ್ಲದ ಕಾರಣ ನಿರ್ಲಕ್ಷ್ಯ!

Public TV
Last updated: July 23, 2018 9:09 am
Public TV
Share
2 Min Read
Onachalli Falls Collage
SHARE

ಮಡಿಕೇರಿ: ದಟ್ಟಾರಣ್ಯದ ಮಧ್ಯದಲ್ಲೊಂದು ಜಲಪಾತ ಮೂಲಸೌಕರ್ಯ ಹಾಗೂ ಪ್ರವಾಸಿಗರಿಗೆ ಮಾಹಿತಿ ಇಲ್ಲದ ಕಾರಣ ನಿರ್ಲಕ್ಷ್ಯಕ್ಕೊಳಗಾಗಿದೆ. ಕೊಡಗು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುತ್ತಿರುವ ಮಂಜು ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು.

ಜಲಪಾತ ಎಂದೊಡನೆ ಮಡಿಕೇರಿಯ ಅಬ್ಬಿಫಾಲ್ಸ್ ಹಾಗೂ ಸೋಮವಾರಪೇಟೆಯ ಮಲ್ಲಳ್ಳಿ ಫಾಲ್ಸ್ ನೆನಪಾಗುತ್ತದೆ. ಆದರೆ ಇದನ್ನು ಹೊರತುಪಡಿಸಿ ಕಾನನದ ಅಂಚಿನಲ್ಲಿರುವ ಜಲಪಾತವೊಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದುವೇ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಣಚುಲು ಗ್ರಾಮದಲ್ಲಿರೋ ಒಣಚಲು ಜಲಪಾತ. ಆದರೆ ಪ್ರವಾಸೋದ್ಯಮದಿಂದ ದೂರ ಉಳಿದಿರುವ ಈ ಜಲಪಾತದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಜೊತೆಗೆ ಇಲ್ಲಿ ಮೂಲ ಸೌಕರ್ಯಗಳು ಕೂಡ ಇಲ್ಲ. ಇದನ್ನೂ ಓದಿ: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

ಈ ಜಲಪಾತ ಖಾಸಗಿ ಪ್ರದೇಶದಲ್ಲಿದೆ. ಹಾಗಾಗಿ ಈ ಜಲಪಾತಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದು ಇಲ್ಲ. ಸ್ಥಳೀಯರೊಂದಿಗೆ ಅಪರೂಪವಾಗಿ ಮಾತ್ರ ಕೆಲವು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಸಂಚಾರ ದುಸ್ತರ ಗಾಳಿ ಬೀಡುವಿನಿಂದ ಮುಂದೆ ಸಾಗುವ ಮಾರ್ಗದಲ್ಲಿ ಸಿಗುವ ಒಣಚಲು ಜಲಪಾತಕ್ಕೆ ತೆರಳಲು ಮೂಲ ಸೌಕರ್ಯಗಳಿಲ್ಲ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಕಾಡಿನ ಮಧ್ಯೆ ಇರುವ ಮಾರ್ಗಗಳು ಸಂಪೂರ್ಣ ಕೆಸರುಮಯವಾಗಿದ್ದು, ಸಂಚಾರ ದುಸ್ತರವಾಗಿದೆ. ಈ ಪ್ರದೇಶ ಖಾಸಗಿ ವ್ಯಾಕ್ತಿಗೆ ಸೇರಿದುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬಂತಾಗಿದೆ.

Onachalli falls 2

ಅಬ್ಬಿಯನ್ನೇ ಹೋಲುತ್ತೆ ಒಣಚಲು:
ಎತ್ತರ ಪ್ರದೇಶದಿಂದ ಧುಮ್ಮಿಕ್ಕುವ ನೀರನ್ನು ಕಂಡೊಡನೆ ಅಬ್ಬಿಫಾಲ್ಸ್ ನ ಚೆಲುವು ಕಣ್ಣ ಮುಂದೆ ಬರುತ್ತದೆ. ಕ್ಷಣ ಕಾಲ ಅಬ್ಬಿಫಾಲ್ಸ್ ನ ಸೌಂದರ್ಯವನ್ನೇ ನೋಡುತ್ತಿದ್ದೇವೆ ಎಂದು ಅನಿಸಬಹುದು. ಆದರೆ ಇದು ಒಣಚಲು ಜಲಪಾತ. ಇದು ಸೌಂದರ್ಯದಲ್ಲಿ ಅಬ್ಬಿಫಾಲ್ಸ್ ಅನ್ನು ಕೊಂಚ ಮಟ್ಟಿಗೆ ಹೋಲುತ್ತದೆ. ಅಲ್ಲದೇ ಒಂದಲ್ಲ ಎರಡು ಜಲಪಾತ ಇದೆ. ಜಲಪಾತದ ಬಳಿ ತಲುಪುತ್ತಿದ್ದಂತೆಯೇ ನೀರಿನ ಸದ್ದು ಕಿವಿಗಪ್ಪಳಿಸುತ್ತದೆ. ಇದನ್ನೂ ಓದಿ: ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುತ್ತಿದೆ ಜಲಕನ್ಯೆ ಮಲ್ಲಳ್ಳಿ ಜಲಪಾತ!

ತುಸು ಮುಂದೆ ಸಾಗಿದರೆ ನೀರಿನ ಸೌಂದರ್ಯ ಸವಿಯಲು ಸಾಧ್ಯ. ತುಸು ಸಮಯ ನೀರಿನಲ್ಲಿ ಕಳೆದು ಶ್ರಮ ವಹಿಸಿ ಬಂಡೆ ಹಾಗೂ ಕಲ್ಲಿನ ಮೂಲಕ ಮುಂದೆ ಸಾಗಿದರೆ ಮತ್ತೊಂದು ರಮಣೀಯ ಫಾಲ್ಸ್ ಕಣ್ಣ ಮುಂದೆ ಬರುತ್ತದೆ. ಮೇಲಿನಿಂದ ಹರಿಯುವ ನೀರಿನಿಂದಲೇ ಈ ಎರಡು ಜಲಪಾತಗಳು ಸೃಷ್ಟಿಯಾಗಿದ್ದು, ಇವುಗಳ ನಡುವೆ ಸಣ್ಣ ಪುಟ್ಟ ಝರಿಗಳು ಕಣ್ಮನ ಸೆಳೆಯುತ್ತದೆ. ಇದನ್ನೂ ಓದಿ: ವಿಡಿಯೋ: ಮುಂಗಾರಿನ ಅಭಿಷೇಕಕ್ಕೆ ಮೈದುಂಬಿ ಹರೀತಿದೆ ಚೆಲಾವರ ಫಾಲ್ಸ್

ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಒಣಚಲುವಿನಲ್ಲಿ ಈ ನಯನ ಮನೋಹರ ಜಲಪಾತ ಇದೆ. ಮಡಿಕೇರಿಯಿಂದ ಗಾಳಿ ಬೀಡುವಿಗೆ 8 ಕಿ.ಮೀ. ಅಲ್ಲಿಂದ ಒಣಚಲುವಿಗೆ 12ಕ್ಕೂ ಹೆಚ್ಚು ಕಿ.ಮೀ. ಇದೆ. ಜಲಪಾತದಿಂದ ನೀರು ಹಾಲ್ನೊರೆಯಂತೆ ಕೆಳಗೆ ಹರಿಯುತ್ತಿದ್ದರೆ ಕೊಡಗಿನ ಯಾವ ಜಲಪಾತಗಳಿಗೂ ಒಣಚಲು ಕಡಿಮೆ ಇಲ್ಲ ಎಂದರೆ ಅತಿಶಯೋಕ್ತಿ ಅಲ್ಲ. ಇದನ್ನೂ ಓದಿ: ಹಾಲ್ನೊರೆ ಸೂಸುತ್ತಿರುವ ಅಬ್ಬೆ ಫಾಲ್ಸ್!

ಒಟ್ಟಿನಲ್ಲಿ ಒಣಚಲು ಜಲಪಾತ ಖಾಸಗಿ ಪ್ರದೇಶದಲ್ಲಿರೋದ್ರಿಂದಾಗಿ ಹೆಚ್ಚಾಗಿ ಪ್ರವಾಸಿಗರಿಗೆ ಈ ಪ್ರದೇಶದ ಬಗ್ಗೆ ತಿಳಿದಿಲ್ಲ. ಕೊಡಗಿಗೆ ಮಳೆಗಾಲದಲ್ಲಿ ಭೇಟಿ ನೀಡಿದ್ರೆ ನೀವೂ ಒಮ್ಮೆ ಈ ಜಲಪಾತವನ್ನು ಕಣ್ತುಂಬಿಕೊಳ್ಳಿ.

TAGGED:madikeriOnachallu FallsPublic TVtourismTouristsಒಣಚಲು ಜಲಪಾತಪಬ್ಲಿಕ್ ಟಿವಿಪ್ರವಾಸಪ್ರವಾಸಿಗರುಮಡಿಕೇರಿ
Share This Article
Facebook Whatsapp Whatsapp Telegram

Cinema news

Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories
JC Movie Surya Prakyath
ಫ್ಯಾನ್ಸ್ ಮಧ್ಯೆ ಲಾಂಗ್ ಹಿಡಿದು ಪೋಸ್ – ಜೆಸಿ ಸಿನಿಮಾ ನಟನ ವಿರುದ್ಧ ಸುಮೋಟೊ ಕೇಸ್ ದಾಖಲು
Bengaluru City Cinema Districts Karnataka Latest Sandalwood Top Stories

You Might Also Like

DK Shivakumar and delegation
Bengaluru City

ಲೋಪದೋಷ ಸರಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಡಿಕೆಶಿ ನೇತೃತ್ವದ ನಿಯೋಗ ಮನವಿ

Public TV
By Public TV
3 minutes ago
Suryakumar Yadav
Cricket

ಭಾರತ – ಪಾಕಿಸ್ತಾನ ಮಧ್ಯೆ ಮತ್ತೆ ಅಮೆರಿಕ!

Public TV
By Public TV
23 minutes ago
PHAKEERA ARREST
Crime

ದಾವಣಗೆರೆ | 28 ವರ್ಷದ ಹಿಂದೆ ಟಿವಿ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌!

Public TV
By Public TV
27 minutes ago
Prahlad Joshi
Latest

ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ – ಪ್ರಹ್ಲಾದ್ ಜೋಶಿ

Public TV
By Public TV
1 hour ago
Catherine Vautrin
Bengaluru City

ಬೆಂಗಳೂರಿಗೆ ಆಗಮಿಸಿದ ಫ್ರಾನ್ಸ್‌ ರಕ್ಷಣಾ ಸಚಿವೆ ಕ್ಯಾಥರಿನ್ ವೌಟ್ರಿನ್

Public TV
By Public TV
1 hour ago
h d thammaiah
Bengaluru City

ನಾನು ರೈತನ ಮಗ, ಕೃಷಿ ಅಧ್ಯಯನಕ್ಕೆ ವಿದೇಶ ಪ್ರವಾಸಕ್ಕೆ ಹೋಗ್ತಿದ್ದೇನೆ: ತಮ್ಮಯ್ಯ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?