ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ (Kadamba Naval Base) ವ್ಯಾಪ್ತಿಯಲ್ಲಿ ಈ ಹಿಂದೆ ರಾತ್ರಿ ವೇಳೆ ದ್ರೋಣ್ ಕ್ಯಾಮರಾ ಬಳಸಿ ನೌಕಾನೆಲೆಯ ಚಿತ್ರಗಳನ್ನು ಆಗುಂತಕರು ಸೆರೆಹಿಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ನೌಕಾ ನೆಲೆಯ ಸರಹದ್ದು ವ್ಯಾಪ್ತಿಯಲ್ಲಿ ಟ್ರ್ಯಾಕರ್ ಅಳವಡಿಸಿದ ರಣ ಹದ್ದು (War Eagle) ಪ್ರತ್ಯಕ್ಷವಾಗಿದೆ.
Advertisement
ಕಾರವಾರದ ನದಿ ದಡದಲ್ಲಿ ಸ್ಥಳೀಯರು ಇದರ ಫೋಟೋ ತೆಗೆದು ನೌಕಾದಳದ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಣಹದ್ದಿನ ದೇಹದ ಮೇಲೆ ಟ್ರ್ಯಾಕರ್ (Tracker) ಅಳವಡಿಸಲಾಗಿದ್ದು, ಕಾಲುಗಳಿಗೆ ಟೇಪ್ಗಳ ಬಳೆಗಳನ್ನು ಅಳವಡಿಸಲಾಗಿದೆ. ಹೀಗಾಗಿ ರಣಹದ್ದಿನ ಮೂಲಕ ಬೇಹುಗಾರಿಕೆಯನ್ನು ಶತ್ರು ರಾಷ್ಟ್ರಗಳು ನಡೆಸುತ್ತಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ. ಈ ಹದ್ದನ್ನು ಹಿಡಿಯಲು ಪ್ರಯತ್ನಿಸಿದರೂ ಸಿಗದೇ ಹಾರಿ ಹೋಗಿದೆ. ಇದನ್ನೂ ಓದಿ: ಅಬಕಾರಿಯಲ್ಲಿ 700 ಕೋಟಿ ಹಣ ಪಡೆಯೋಕಾಗುತ್ತಾ? ಸುಳ್ಳಿ ಹೇಳೋದು ಪ್ರಧಾನಿಗೆ ಅಗೌರವ – ಸಿಎಂ
Advertisement
Advertisement
ಈ ಹಿಂದೆ ಕದಂಬ ನೌಕಾನೆಲೆಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಮಿಕರನ್ನು ಬಳಸಿ ಶತ್ರು ರಾಷ್ಟ್ರವು ಕದಂಬ ನೌಕಾನೆಲೆಯ 2ನೇ ಹಂತದ ಕಾಮಗಾರಿ ಹಾಗೂ ಯುದ್ಧ ಹಡಗುಗಳ ಬಗ್ಗೆ ಮಾಹಿತಿ ಪಡೆದಿದ್ದರು. ಈ ಪ್ರಕರಣ ಸಂಬಂಧ 5 ಜನರನ್ನು ಬಂಧಿಸಲಾಗಿತ್ತು. ನಂತರ ರಾತ್ರಿ ನಿಷೇಧಿತ ನೌಕಾನೆಲೆಯ ಪ್ರದೇಶದಲ್ಲಿ ದ್ರೋಣ್ ಕ್ಯಾಮೆರಾ ಹಾರಿಸಿದ್ದು ಇದರ ಬೆನ್ನಲ್ಲೇ ಟ್ರ್ಯಾಕರ್ ಅಳವಡಿಸಿದ ಹದ್ದು ಹಾರಾಟ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
Advertisement
ಕೆಲವರು ಸಂಶೋಧಕರು ಗಣತಿಗಾಗಿ ಈ ರೀತಿ ಟ್ರ್ಯಾಕರ್ ಹಾಕಿರಬಹುದಾ ಅಥವಾ ಇನ್ಯಾವುದೇ ಕಾರಣಕ್ಕಾ ಎಂಬುದರ ಬಗ್ಗೆ ತನಿಖೆ ನಡೆಯುತಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಇದನ್ನೂ ಓದಿ: 25 ಲಕ್ಷ ಉದ್ಯೋಗಾವಕಾಶ, 1 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ, ಉದ್ಯಮಿಗಳಿಗೆ ಬೆಂಬಲ – ಮಹಾರಾಷ್ಟ್ರಕ್ಕೆ ಬಿಜೆಪಿ 25 ಗ್ಯಾರಂಟಿ