ಜಾಗವನ್ನು ಬಿಡಿಸಿಕೊಡುವಂತೆ ಇಸ್ಲಾಮಿಯಾ ತಂಜೀಮ್ ಸಮಿತಿಯಿಂದ ಮನವಿ
ಬಾಗಲಕೋಟೆ: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ವಕ್ಫ್ ಆಸ್ತಿ ವಿವಾದ (Waqf property Controversy) ಬಾಗಲಕೋಟೆ ಜಿಲ್ಲೆಗೂ ವ್ಯಾಪಿಸಿದೆ. ಇಲ್ಲಿನ ಸರ್ಕಾರಿ ಕಚೇರಿಗಳು ವಸತಿ ನಿಲಯಗಳು, ಆಶ್ರಯ ಮನೆಗಳಿಗೆ ವಕ್ಫ್ ಆಸ್ತಿಯಾಗಿದ್ದು, ತಮಗೆ ಬಿಡಿಸಿಕೊಡುವಂತೆ ಇಸ್ಲಾಮಿಯಾ ತಂಜೀಮ್ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Advertisement
Advertisement
ಬಾಗಲಕೋಟೆ ತಾಲೂಕಿನ ಸುಮಾರು 16,000 ಜನಸಂಖ್ಯೆಯುಳ್ಳ ಶಿರೂರು ಗ್ರಾಮದಲ್ಲಿನ ಮೊರಾರ್ಜಿ ವಸತಿ ಶಾಲೆ (Morarji desai Residential School), ಪಕ್ಕದಲ್ಲಿರುವ ಬಾಲಕಿಯರ ವಸತಿ ಶಾಲೆ, ಆಶ್ರಯ ಮನೆಗಳು, ಹೆಸ್ಕಾಮ್ ಕಚೇರಿ, ಇವೆಲ್ಲ ವಕ್ಫ್ ಆಸ್ತಿ. ಗ್ರಾಮದ ಸರ್ವೆ ನಂ.92 ರಲ್ಲಿ ಬರುವ 54.2 ಎಕರೆ ಜಾಗ ಎಲ್ಲವೂ ವಕ್ಫ್ ಆಸ್ತಿ ಎಂದು ಇಸ್ಲಾಮಿಯಾ ತಂಜೀಮ್ ಸಮಿತಿ ಹೇಳಿಕೊಂಡಿದೆ. ಇದನ್ನೂ ಓದಿ: ಸಿಎಂ ಏನು ತಪ್ಪು ಮಾಡಿಲ್ಲ, ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ: ಡಿಕೆಶಿ
Advertisement
Advertisement
ತಂಜೀಮ್ ಸಮಿತಿ ನೋಟಿಸ್ ನೀಡಿರುವ ಸರ್ವೆ ನಂಬರ್ ಜಾಗದಲ್ಲಿ ಹೆಸ್ಕಾಮ್, ಮೊರಾರ್ಜಿ ವಸತಿ ಶಾಲೆ, ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, 1,200 ಆಶ್ರಯ ಯೋಜನೆ ಮನೆಗಳಿವೆ. ಇವೆಲ್ಲವೂ ವಕ್ಫ್ ಆಸ್ತಿಯಾಗಿದ್ದು, ತೆರವು ಮಾಡಿಸುವಂತೆ ಇಸ್ಲಾಮಿಯಾ ತಂಜೀಮ್ ಕಮೀಟಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಈ ಬೆನ್ನಲ್ಲೇ ಮೇಲ್ಕಂಡ ಎಲ್ಲ ಸಂಸ್ಥೆ ಹಾಗೂ ಗ್ರಾಮದ ನಿವಾಸಿಗಳಿಗೆ ನೋಟಿಸ್ ಬಂದಿದ್ದು, ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಇಲ್ಲಿ ಗ್ರಾಮಸ್ಥರಿಗೆ ನೇರವಾಗಿ ನೋಟಿಸ್ ಬಂದಿಲ್ಲ, ಪಹಣಿಯಲ್ಲೂ ವಕ್ಪ್ ಎಂದು ನಮೂದಾಗಿಲ್ಲ. ಆದರೆ ಇಸ್ಲಾಮಿಯಾ ತಂಜೀಮ್ ಕಮೀಟಿ ಇದು ವಕ್ಪ್ ಆಸ್ತಿ, ಇದನ್ನ ತನ್ನ ಸುಪರ್ದಿಗೆ ತೆಗೆದುಕೊಂಡು ನಮಗೆ ನೀಡಬೇಕೆಂದು ಡಿಸಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ICC Test Ranking | ಆರಕ್ಕೇರಿದ ಪಂತ್, ಟಾಪ್-20 ಪಟ್ಟಿಯಿಂದಲೂ ಕೊಹ್ಲಿ ಔಟ್
ಜಿಲ್ಲೆಯ ವಕ್ಫ್ ಆಸ್ತಿ ವಿವಾದ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದು, ರೈತರು ತಮ್ಮ ಆಸ್ತಿ ಉಳಿಸಿಕೊಳ್ಳಲು ಅಲೆದಾಡುವಂತಾಗಿದೆ. ಈ ನಡುವೆ ಸರ್ಕಾರ, ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಸ್ಲಾಮಿಯಾ ತಂಜೀಮ್ ಕಮೀಟಿ ಮನವಿಯಂತೆ ವಕ್ಪ್ ಎಂದು ಜಪ್ತಿ ಮಾಡಿದರೆ, ನಾವು ಕಾನೂನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕೋದಿಲ್ಲ ಎಂದು ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Tungabhadra Dam | ಡ್ಯಾಂಗೆ ಬೋರ್ಡ್ ಅಧಿಕಾರಿಗಳ ಭೇಟಿ, 33 ಗೇಟ್ ಬದಲಾವಣೆಗೆ ಚಿಂತನೆ