ವಿಜಯಪುರ: ಯಾರ ಪಾಲನ್ನು ಕೊಡುತ್ತಿರೋ ಬಿಡುತ್ತಿರೋ ಗೊತ್ತಿಲ್ಲ. ನನ್ನದಂತೂ ಬೇಕು ಎಂದು ಅಬಕಾರಿ ಅಧಿಕಾರಿಯೊಬ್ಬರು ಬಾರ್ ಮಾಲೀಕರಿಗೆ ಲಂಚ (Bribe) ಕೇಳುತ್ತಿರುವ ವೀಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಬಕಾರಿ ಕಚೇರಿಯಲ್ಲಿ (Excise Department) ಈ ಘಟನೆ ನಡೆದಿದೆ. ಅಬಕಾರಿ ಅಧಿಕಾರಿ ಜ್ಯೋತಿ ಮೇತ್ರಿ, ಬಾರ್ ಮಾಲೀಕನ ಬಳಿ ತಿಂಗಳ ಪಾವತಿ ಬಗ್ಗೆ ಮಾತನಾಡುತ್ತಾ ಗರಂ ಆಗಿರುವ ಘಟನೆ ಇದಾಗಿದೆ.
ವೀಡಿಯೋದಲ್ಲಿ ಏನಿದೆ?: ಡಿಸಿ ಸರ್‌ಗೆ ಕೊಟ್ಟು ಬಂದ್ದಿದ್ದೀರಿ. ಅವರೇ ಜೆಸಿ ಸರ್ ಮುಂದೆ ತಗೊಂಡಿದ್ದೇನೆ ಎಂದು ಓಪನ್ ಆಗಿ ಹೇಳುತ್ತಾರೆ. 4 ತಾಲೂಕಿನಿಂದ ತಗೊಂಡಿದ್ದೀನಿ, ವಿಜಯಪುರ ಒಂದೇ ಬಾಕಿ ಇದೆ ಅಂತಾ ಹೇಳಿದ್ದಾರೆ. ಜೆಸಿಗೂ ಆಯಿತು. ಎಲ್ಲರದೂ ಅಪಡೇಟ್ ಮುಗೀತು. ರಿನಿವಲ್ ಮುಗೀತು. ನನ್ನದೊಂದೇ ಏಕೆ ಕಾಡುತ್ತಿದ್ದೀರಿ ಹೇಳಿ ಎಂದು ಅಬಕಾರಿ ಅಧಿಕಾರಿ ಜ್ಯೋತಿ ಮೇತ್ರಿ ಗರಂ ಆಗಿದ್ದಾರೆ.
ನನಗೆ ಜುಲೈದು 15 ಸಾವಿರ ಮಂತ್ಲಿ ಬೇಕೆಬೇಕು. ಹಳ್ಳಿ, ಹಳ್ಳಿದು 20, 30 ಕೊಡ್ತಾರೆ. ನಾನೇ ಸಬ್ ಇನ್ಸ್‍ಪೆಕ್ಟರ್ ಆಗಿದ್ದಾಗ ನಾಗೇಶ್ ಹತ್ತಿರ ಹತ್ತು ಸಾವಿರ ತಗೆದುಕೊಂಡು ಬಂದಿದ್ದೇನೆ ಎಂದು ಜ್ಯೋತಿ ಹೇಳಿದ್ದಕ್ಕೆ ಜುಲೈದು ಬಿಟ್ಟು ಬಿಡಿ ಮೇಡಂ ತೊಂದರೆ ಇದೆ. ಇನ್ನು ಮುಂದೆ ತಪ್ಪದೇ ಮಂತ್ಲಿ ಕೊಡ್ತೇವೆ. ಪ್ರತಿ ತಿಂಗಳು 20ಕ್ಕೆ ಕೊಡೋದು ನನ್ನ ಜವಾಬ್ದಾರಿ ಎಂದ ಬಾರ್ ಮಾಲೀಕ ಗಣೇಶ ಹೇಳಿದಾಗ ಅದಕ್ಕೆ ಒಪ್ಪದೆ ಜುಲೈ ತಿಂಗಳಿನದ್ದು ಕೊಡಲೇಬೇಕು ಎಂದ ಜ್ಯೋತಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ
ಒಟ್ಟಿನಲ್ಲಿ ಅಬಕಾರಿ ಕಚೇರಿಯಲ್ಲೇ ಕುಳಿತು ಅಬಕಾರಿ ಅಧಿಕಾರಿ ಮಂತ್ಲಿ ಡೀಲ್ ಮಾಡಿದ್ದು, ಅಲ್ಲದೆ ಮೇಲಿನ ಬರಿಗೆ ಯಾರ್ಯಾರಿಗೆ ಹಫ್ತಾ ಮುಟ್ಟುತ್ತೆಯಂತಾ ವಿವರವಾಗಿ ಹೇಳಿ ತಗಾಲಕೊಂಡಿದ್ದಾರೆ. ಜ್ಯೋತಿಯ ಭಂಡತನ ಕಂಡು ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ. ಇದರ ಬಗ್ಗೆ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಜಾರಕಿಹೊಳಿ ಯಾವಾಗ ಸರ್ಕಾರ ಕೆಡವುತ್ತಾರೋ? ಯಾವಾಗ ಸರ್ಕಾರ ತರುತ್ತಾರೋ?: ಜಯಮೃತ್ಯುಂಜಯ ಸ್ವಾಮೀಜಿ