ವಾಷಿಂಗ್ಟನ್: ವಿದೇಶಗಳಲ್ಲಿ ವಿಚ್ಛೇದನ ಪಡೆಯೋದು, ಒಬ್ಬ ಮಹಿಳೆ (US Women) ಹೆಚ್ಚು ಪುರುಷರನ್ನ ವಿವಾಹವಾಗೋದು (Marriage) ಎಲ್ಲವೂ ಕಾಮನ್. ಇಂತಹ ಘಟನೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಲೇ ಇರುತ್ತವೆ. ಹಾಗೆಯೇ ಇಲ್ಲೊಬ್ಬಳು ಮಹಿಳೆ ಒಬ್ಬರಲ್ಲ, ಇಬ್ಬರಲ್ಲ 8 ಗಂಡಂದಿರನ್ನು ಹೊಂದಿದ್ದು, 11 ಮಕ್ಕಳನ್ನು ಹೊಂದಿದ್ದಾಳೆ. ಇನ್ನೂ 19 ಮಕ್ಕಳನ್ನು ಮಾಡಿಕೊಳ್ಳುವ ಯೋಜನೆಯಲ್ಲಿದ್ದಾಳೆ.
Advertisement
ಈ ಕುರಿತು ಸ್ವತಃ ಅಮೆರಿಕದ (America) ಮಹಿಳೆಯೇ ಹೇಳಿಕೊಂಡಿರುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 1 ಲಕ್ಷಕ್ಕೂ ಹೆಚ್ಚು ಜನರು ವೀಡಿಯೋವನ್ನು (Video) ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ತನ್ನ ನಡೆಗೆ ಕಾರಣ ಏನೆಂಬುದನ್ನೂ ಹೇಳಿಕೊಂಡಿದ್ದಾಳೆ. ಒಟ್ಟಿನಲ್ಲಿ ಮಹಿಳೆಯ ಈ ವೀಡಿಯೋ ಟ್ರೋಲ್ಗಳಿಗೆ ಆಹಾರವಾಗಿದೆ. ಇದನ್ನೂ ಓದಿ: BJP ಸೇರಲು ಕಂಗನಾಗೆ ಗ್ರೀನ್ ಸಿಗ್ನಲ್ ಕೊಟ್ಟು ಆದರೆ.. ಎಂದ ನಡ್ಡಾ
Advertisement
Advertisement
ಟಿಕ್ಟಾಕ್ನಲ್ಲಿ ಫೈ ಎಂದು ಕರೆಯಲ್ಪಡುವ ಈ ಮಹಿಳೆ ಅಮೆರಿಕದ ನಿವಾಸಿಯಾಗಿದ್ದಾಳೆ. ಇದೇ ಟಿಕ್ಟಾಕ್ ವೇದಿಕೆಯ ತನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಹೆಡ್ ಬುಷ್ ಚಿತ್ರದ ಪ್ರಚಾರ – ತೊಂದರೆ ಕೊಡ್ತಿದ್ದಾರೆಂದು ಐವರ ವಿರುದ್ಧ FIR
Advertisement
ವೀಡಿಯೋನಲ್ಲಿ ಮಹಿಳೆ ಹೇಳಿದ್ದೇನು?
ತನ್ನ 8 ಗಂಡಂದಿರನ್ನು ಉಲ್ಲೇಖಿಸಿ, ಇದನ್ನು ಸರಳ ಗಣಿತ ಎನ್ನುತ್ತಾರೆ. 8 ಜನ ಗಂಡಂದಿರ ಮಕ್ಕಳಿಗೆ ಜನ್ಮ ನೀಡುವುದರ ಹಿಂದೆ ರಹಸ್ಯ ಕಾರಣವಿದೆ. ನನ್ನ ಮಕ್ಕಳಿಗೆ ಒಬ್ಬನೆ ತಂದೆಯಿದ್ದರೆ, ನಾನು ಸತ್ತ ನಂತರ ಅವರು ಒಂಟಿಯಾಗುತ್ತಿದ್ದರು. ಈಗ 8 ಜನ ಗಂಡಂದಿರಲ್ಲಿ ಮೂವರು ಅಗಲಿದರೂ ಅಥವಾ ಬಿಟ್ಟುಹೋದರೂ ಇನ್ನೂ ಐವರು ತಂದೆಯರು ಇರುತ್ತಾರೆ ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೇಕಿಲ್ಲ ಗೌರವ – ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ
ಅಲ್ಲದೇ ಮಕ್ಕಳು ಹೆರುವುದನ್ನು ಇದೇ ರೀತಿ ಮುಂದುವರಿಸುತ್ತೇನೆ. ಇನ್ನೂ 19 ಮಕ್ಕಳನ್ನು ಹೊಂದುವ ಮೂಲಕ 30 ಮಕ್ಕಳಿಗೆ ಜನ್ಮ ನೀಡಲು ಬಯಸುತ್ತೇನೆ. ಅದಕ್ಕಾಗಿ ಇನ್ನೂ ಹೆಚ್ಚಿನ ಗಂಡಂದಿರನ್ನು ಹೊಂದಿರಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಕೆಲವರು ಮಹಿಳೆಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಬೆಂಬಲಿಸಿದ್ದಾರೆ.