ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ

Public TV
2 Min Read
Latiesha Jones 4

ಲಂಡನ್‌: ಸಾಮಾನ್ಯವಾಗಿ ಕಂಡ ಕಂಡಲ್ಲಿ ಉಗಿಯುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿರುತ್ತೆ. ಇದನ್ನ ನೋಡಿದ್ರೆ ಕೆಲವರಿಗೆ ಅಸಹ್ಯ ಎನಿಸಬಹುದು. ಆದ್ರೆ ಇಲ್ಲೊಬ್ಬಳು ಮಹಿಳೆ ತನ್ನ ಎಂಜಲು ರಸವನ್ನೇ (ಲಾಲಾ ರಸ) ಮಾರಾಟ (Spit Selling) ಮಾಡಿ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂ. ಸಂಪಾದಿಸುತ್ತಿದ್ದಾಳೆ. ಅಸಾಧ್ಯವೆನಿಸಿದರೂ ನೀವು ಇದನ್ನ ನಂಬಲೇಬೇಕು.

ಹೌದು.. ವೈದ್ಯೆ ಆಗಬೇಕೆಂದುಕೊಂಡಿದ್ದ UKನ ಮ್ಯಾಂಚೆಸ್ಟರ್‌ನ ನಿವಾಸಿ ಲತೀಶಾ ಜೋನ್ಸ್‌ (Latiesha Jones) ಇದೀಗ ತನ್ನ ಎಂಜಲು ರಸವನ್ನ ಮಾರಾಟ ಮಾಡಿ ತಿಂಗಳಿಗೆ 40 ಲಕ್ಷ ಸಂಪಾದಿಸುತ್ತಿದ್ದಾಳೆ. ಅದು ಹೇಗೆ ಅಂತೀರಾ ಮುಂದೆ ನೋಡಿ…

Latiesha Jones 2

ವೈದ್ಯೆ (Doctor) ಆಗಬೇಕೆಂದು ಬಯಸಿದ್ದ ಲತೀಶಾ ಜೋನ್ಸ್‌ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆಗ ಟೆಸ್ಕೊ ಎಂಬ ಕಿರಾಣಿ ಅಂಗಡಿಯಲ್ಲಿ ಪಾರ್ಟ್‌ಟೈಮ್‌ ಕೆಲಸಕ್ಕೆ ಹೋಗುತ್ತಿದ್ದಳು. ಅದೂ ಸಾಕಾಗದೇ ಇದ್ದಾಗ, ಆಕೆ ಜಾಲತಾಣದಲ್ಲಿ ಓನ್ಲಿ ಫ್ಯಾನ್ಸ್‌ ಖಾತೆಯೊಂದನ್ನ ತೆರೆದು ವೀಡಿಯೋ ಮಾಡಲು ಪ್ರಾರಂಭಿಸಿದ್ದಳು. ಆಗ ವೀಕ್ಷಕರು ಆಕೆಗೆ ವಿಚಿತ್ರವಾದ ಬೇಡಿಕೆಗಳನ್ನ ಮುಂದಿಟ್ಟರು. ಇದೇ ಅವಳನ್ನು ಉಗುಳು ಮಾರಾಟ ಮಾಡಲು ದಾರಿ ಮಾಡಿಕೊಟ್ಟಿತು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್‌, 50ರ ವೃದ್ಧ ಸೀದಾ ಆಸ್ಪತ್ರೆಗೆ – ಆಮೇಲೆ ಏನಾಯ್ತು?

Latiesha Jones 1

ಈ ಬಗ್ಗೆ ಇಂಟರೆಸ್ಟಿಂಗ್‌ ಸಂಗತಿಯೊಂದನ್ನ ಹೇಳಿಕೊಡಿರುವ ಲತೀಶಾ ಅದು ಹೇಗೆ ಪ್ರಾರಂಭವಾಯಿತು ಎಂಬುದನ್ನ ತಿಳಿಸಿದ್ದಾರೆ. ಒಮ್ಮೆ ಯಾರೋ ಒಬ್ಬರು ತನ್ನ ಉಗುಳನ್ನು ಕಳುಹಿಸಿಕೊಡುವಂತೆ ಕೇಳಿದ್ದರು. ತಕ್ಷಣಕ್ಕೆ ನಾನು ಇದು ಜೋಕ್‌ ಇರಬೇಕು ಅಂದುಕೊಂಡು 30 ಸಾವಿರ ರೂ. (372 ಡಾಲರ್‌) ಕಳುಹಿಸುವಂತೆ ಕೇಳಿದೆ. ನನ್ನ ಬ್ಯಾಂಕ್‌ ಡಿಟೇಲ್ಸ್‌ ಪಡೆದ ಆ ವ್ಯಕ್ತಿ ತಕ್ಷಣವೇ ಹಣ ಹಾಕಿಬಿಟ್ಟ. ನನಗೆ ಒಂದು ಕ್ಷಣ ನಂಬೋದಕ್ಕೆ ಸಾಧ್ಯವಾಲಿಲ್ಲ ಎಂದು ಲತೀಶಾ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್‌ಗಿಂತಲೂ ಭಯಾನಕ – ಮುಂದಿನ ಸಾಂಕ್ರಾಮಿಕ ಎದುರಿಸಲು ಸಿದ್ಧರಾಗಿ: WHO ಎಚ್ಚರಿಕೆ

Latiesha Jones 3

ಆ ನಂತರ ಅದೇ ವೃತ್ತಿಯನ್ನ ಲತೀಶಾ ಮುಂದುವರಿಸಿದ್ದಾಳೆ. ಕಳೆದ 4 ವರ್ಷಗಳಿಂದಲೂ ಎಂಜಲು ರಸ ಮಾರಾಟ ಮಾಡುತ್ತಿದ್ದು, ತನಗಿದ್ದ 9.10 ಲಕ್ಷ ರೂ. (11,000 ಸಾವಿರ ಡಾಲರ್‌) ಸಾಲವನ್ನೂ ಮರುಪಾವತಿ ಮಾಡಿದ್ದಾಳೆ. ಜೊತೆಗೆ ಪಾರ್ಟ್‌ಟೈಮ್‌ ಕೆಲಸವನ್ನೂ ತೊರೆದಿದ್ದಾಳೆ. ಅಂದು ಹಣವಿಲ್ಲದೇ ಪಾರ್ಟ್‌ಟೈಮ್‌ ಕೆಲಸ ಮಾಡುತ್ತಿದ್ದ ಈಕೆ ಎಂಜಲು ರಸ ಮಾರಾಟದಿಂದಲೇ ಆಸ್ತಿಯನ್ನೂ ಖರೀದಿ ಮಾಡಿದ್ದು, ಪೂರ್ಣ ಹಣವನ್ನೂ ನಗದು ರೂಪದಲ್ಲೇ ಪಾವತಿಸಿದ್ದಾಳೆ. ಲತೀಶಾ ತನ್ನ ಉಗುಳು ಮಾತ್ರವಲ್ಲ, ತನ್ನ ವಾರದ ಬೆಡ್‌ಶೀಟ್‌ಗಳು, ಬೆವರು ಒರೆಸಿದ ಜಿಮ್ ಬಟ್ಟೆಗಳು, ಕೊಳಕು ಟೂತ್ ಬ್ರಷ್‌ಗಳು ಮತ್ತು ಕಾಲ್ಬೆರಳ ಉಗುರುಗಳನ್ನೂ ಅಭಿಮಾನಿ ಗ್ರಾಹಕರಿಗೆ ಮಾರಾಟ ಮಾಡುತ್ತಾ, ಸಿಕ್ಕಾಪಟ್ಟೆ ಹಣ ಗಳಿಸುತ್ತಿದ್ದಾಳೆ.

Latiesha Jones 5

ಎರಡೇ ವರ್ಷದಲ್ಲಿ ವೈದ್ಯಕೀಯ ಶಿಕ್ಷಣ ತೊರೆದು ಈಗ ರಾಣಿಯಂತೆ ಮೆರೆಯುತ್ತಿದ್ದಾಳೆ. ಮೊದಲು ದಿನಕ್ಕೆ 30 ಸಾವಿರ ರೂ. ಪಡೆಯುತ್ತಿದ್ದ ಲತೀಶಾ ಈಗ ಒಂದು ಸಣ್ಣ ಬಾಟಲಿಯಷ್ಟು ಎಂಜಲು ರಸಕ್ಕೆ 1.50 ಲಕ್ಷ ರೂ.ಗಳಿಗಿಂತ ಕಡಿಮೆ ಮುಟ್ಟೋದೇ ಇಲ್ಲ ಅಂತಿದ್ದಾಳೆ. ಈಕೆಯ ಎಂಜಲು ರಸಕ್ಕೆ ಇಷ್ಟೊಂಡು ಡಿಮ್ಯಾಂಡ್‌ ಇದೆಯಾ ಅಂತಾ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

Share This Article