ಬಾಗಲಕೋಟೆ: ಆಗಸ್ಟ್ 20 ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಕ್ಕೂರು ಕ್ರಾಸ್ ಬಳಿ ಬೈಕಿಗೆ, ಕಾರು ಡಿಕ್ಕಿಯಾಗಿ ಬೈಕ್‍ನಲ್ಲಿದ್ದ ಅಜ್ಜಿ ಸಾವನ್ನಪ್ಪಿದ್ದು ಸುದ್ದಿಯಾಗಿತ್ತು. ಆದರೆ ಆ ಅಪಘಾತ ಪ್ರಕರಣಕ್ಕಿಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಬಾಗಲಕೋಟೆ (Bagalkote) ಜಿಲ್ಲೆಯ ಮುಧೋಳ ತಾಲೂಕಿನ ಜಕ್ಕೂರು ಕ್ರಾಸ್ ಬಳಿ ನಡೆದಿದ್ದ ಅಪಘಾತ ಉದ್ದೇಶ ಪೂರ್ವಕವಾಗಿ ನಡೆದ ಕೊಲೆ ಎಂದು ಗೊತ್ತಾಗಿದೆ.
ಹೌದು. ಆಗಸ್ಟ್ 20ರ ರಾತ್ರಿ 8 ಗಂಟೆ ಸುಮಾರಿಗೆ ಜಕ್ಕೂರು ಕ್ರಾಸ್ ಬಳಿ ಬೈಕಿಗೆ ಕಾರು (Bike- Car Accident) ಡಿಕ್ಕಿಯಾಗಿ ಬೈಕ್ ಹಿಂಬದಿ ಕೂತಿದ್ದ ತಾಯವ್ವ ಅರಕೇರಿ (68) ಎಂಬ ವೃದ್ಧೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಚಿಕಿತ್ಸೆ ಫಲಿಸದೇ ತಾಯವ್ವ ಆಗಸ್ಟ್ 28ರಂದು ಸಾವನ್ನಪ್ಪಿದ್ರು. ಆದರೆ ಅದು ಸಹಜ ಆಕ್ಸಿಡೆಂಟ್ ಅಲ್ಲ, ಉದ್ದೇಶ ಪೂರ್ವಕವಾಗಿ ನಡೆದ ಕೊಲೆ ಎಂದು ಮೃತ ಅಜ್ಜಿಯ ಸಂಬಂಧಿಕ ಮಂಜುನಾಥ್ ಉದಗಟ್ಟಿ ಎಂಬವರು ಲೋಕಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ರು.
Advertisement
ಅಜ್ಜಿಯ ಕೊಲೆಗೆ ಮೊಮ್ಮಗನೇ ಸ್ಕೆಚ್ ರೂಪಿಸಿದ್ದ ಎಂದು ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಲೋಕಾಪುರ ಪೊಲೀಸರು, ಮೃತ ಅಜ್ಜಿಯ ಮೊಮ್ಮಗ (ಮಗನ ಮಗ) ದುಂಡಪ್ಪ ಅರಕೇರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ವಿಚಾರಣೆ ವೇಳೆ ದುಂಡಪ್ಪ ಅರಕೇರಿ, ಅಜ್ಜಿಯ ಸಾವಿಗೆ ನಾನೇ ಕಾರಣ ಎಂದು ಒಪ್ಪಿಕೊಂಡಿದ್ದಾನೆ. ಇದ್ರಿಂದ ಅಜ್ಜಿಯ ಸಾವಿಗೆ ಮೊಮ್ಮಗನೇ ಕಾರಣ ಎಂದು ಲೋಕಾಪುರ ಪೊಲೀಸರು ಆರೋಪಿ ದುಂಡಪ್ಪ ಹಾಗೂ ಈತನ ಸಹಚರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Advertisement
Advertisement
ಕೊಲೆಗೆ ಕಾರಣವೇನು..?; ತಾಯವ್ವ ಹಾಗೂ ಆರೋಪಿ ಮೊಮ್ಮಗ ದುಂಡಪ್ಪ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಖಜ್ಜಿಡೋಣಿ ಗ್ರಾಮದವರಾಗಿದ್ದಾರೆ. ಅಜ್ಜಿ ಹಾಗೂ ಮೊಮ್ಮಗನ ನಡುವೆ ಆಸ್ತಿ ಹಾಗೂ ಬೋರ್ ವೆಲ್ ಮೋಟಾರ್ ವಿವಾದವಿತ್ತು. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೋರ್ಟ್ ನಲ್ಲಿ ತಾಯವ್ವ ಪರ ತೀರ್ಪು ಬಂದಿತ್ತು, ಆದರೆ ಮೊಮ್ಮಗ ದುಂಡಪ್ಪ, ಅಜ್ಜಿ ತಾಯವ್ವಗೆ ಬೋರ್ ವೆಲ್ ಮೋಟಾರು ವೈರ್ ಕೊಡಲು ನಿರಾಕರಿಸಿದ್ದ. ಆಗ ಮೃತ ಅಜ್ಜಿ ತಾಯವ್ವ ಕೆಲ ದಿನಗಳ ಹಿಂದೆ ಲೋಕಾಪುರ ಠಾಣೆಯಲ್ಲಿ ದೂರು ನೀಡಿದ್ದಳು. ಇದನ್ನೂ ಓದಿ: ಒಂಟಿ ಮನೆ ಟಾರ್ಗೆಟ್ ಮಾಡಿ ಗೃಹಿಣಿ ಮೇಲೆ ಹಲ್ಲೆ – ಮಗುವಿನ ಚಿಕಿತ್ಸೆಗಿಟ್ಟಿದ್ದ ಹಣದೊಂದಿಗೆ ದರೋಡೆಕೋರ ಪರಾರಿ
Advertisement
ಆಗ ಪೊಲೀಸರು ಕೊಲೆ ಆರೋಪಿ ಗುಂಡಪ್ಪನನ್ನು ಕರೆದು ಮೋಟಾರ್ ವೈರ್ ಕೊಡಲು ಹೇಳಿದ್ದರು. ಪೊಲೀಸರ ಎದುರು ಮೋಟಾರ್ ವೈರ್ ಕೊಡಲು ಒಪ್ಪಿಕೊಂಡಿದ್ದ ದುಂಡಪ್ಪ, ನಂತರ ತಾಯವ್ವ ಹಾಗೂ ಆಕೆಯ ಮಗ ಶ್ರೀಧರ ಬೈಕಿನಲ್ಲಿ ಹೋಗುವಾಗ ಕಾರನ್ನ ಬೈಕಿಗೆ ಜೋರಾಗಿ ಡಿಕ್ಕಿ ಹೊಡೆಸಿದ್ದ. ಅಪಘಾತದಲ್ಲಿ ವೃದ್ದೆ ತಾಯವ್ವಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವೃದ್ಧೆ ತಾಯವ್ವ ಸಾವನ್ನಪ್ಪಿದ್ದರು.
ಅಪಘಾತದಲ್ಲಿ ಸಂಶಯವಿದೆ ಎಂದು ಸೆಪ್ಟೆಂಬರ್ 5 ರಂದು ತಾಯವ್ವಳ ಸಂಬಂಧಿಕ ಮಂಜುನಾಥ ಉದಗಟ್ಟಿ ದೂರು ನೀಡಿದ್ರು. ದೂರಿನ ಮೇರೆಗೆ ಲೋಕಾಪುರ ಠಾಣಾ ಪೊಲೀಸರು ಆರೋಪಿ ದುಂಡಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಸದ್ಯ ಕೊಲೆ ಆರೋಪಿ ದುಂಡಪ್ಪ ನನ್ನು ಬಂಧಿಸಿರುವ ಲೋಕಾಪುರ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Web Stories