– ಅಮ್ಮನ ಜೊತೆ ಲವ್ವಿಡವ್ವಿ, ಮಗಳ ಮೇಲೆ ಕಣ್ಣು
ಆನೇಕಲ್: ಬೆಂಗಳೂರನ್ನೇ ಬಿಚ್ಚಿ ಬೀಳಿಸಿದ್ದ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಬಹುತೇಕ ಬೇಧಿಸಿದ್ದಾರೆ. ಹೊಸ ರೋಡ್‍ನಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಕೆದಕ್ತಿದ್ದಂತೆ ಹೊಸ ತಿರುವು ಪಡೆದುಕೊಂಡಿದೆ. ಅರ್ಚನಾ ನಡುಬೀದಿಯಲ್ಲಿ ಹೆಣವಾಗಲು ಹೆತ್ತ ಮಗಳೇ ಕಾರಣವಾದಳಾ ಎಂಬ ಅನುಮಾನ ಮೂಡಿದೆ. ಕೊಲೆಗೆ ಆಸ್ತಿ, ಹಣ, ಅಕ್ರಮ ಸಂಬಂಧನೇ ಕಾರಣ ಅಂತಾನೂ ಹೇಳಲಾಗ್ತಿದೆ.
Advertisement
ಇದೇ ತಿಂಗಳ 27ರ ರಾತ್ರಿ ಹೊಸೂರು ರೋಡ್ ಸಿಗ್ನಲ್ ಬಳಿ ನಡೆದಿದ್ದ ಬರ್ಬರ ಕೊಲೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ನೋಡ ನೋಡ್ತಿದ್ದಂತೆ ಇಬ್ಬರು ಕಿಡಿಗೇಡಿಗಳು ಮಾರಕಾಸ್ತ್ರಗಳಿಮದ ಅರ್ಚನಾ ರೆಡ್ಡಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ರು. ಕೇಸ್ ದಾಖಲಿಸಿಕೊಂಡು ಆರೋಪಿಗಳ ಬೆನ್ನತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳ ಕೈಗೆ ಖೋಳ ತೊಡಿಸಿದ್ದಾರೆ. ಇಷ್ಟಕ್ಕೂ ಇಲ್ಲಿ ನಡುರಸ್ತೆಯಲ್ಲಿ ನೆತ್ತರಕೋಡಿ ಹರಿಸಿದ್ದು ಬೇರಾರೂ ಅಲ್ಲ, ಕೊಲೆಯಾದ ದುರ್ದೈವಿ ಅರ್ಚನಾ ಪ್ರಿಯಕರ ಅಲಿಯಾಸ್ ಮೂರನೇ ಪತಿ ನವೀನ್.
Advertisement
Advertisement
ಅರವಿಂದ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ ಅರ್ಚನಾ 10 ವರ್ಷ ಸಂಸಾರ ಮಾಡಿದ್ಲು. 1 ಗಂಡು, 1 ಹೆಣ್ಣು ಮಗುವಾಗಿತ್ತು. ಬಳಿಕ ಮೊದಲ ಡಿವೋರ್ಸ್ ಪಡೆದು 15 ಕೋಟಿ ಪರಿಹಾರ ಪಡೆದುಕೊಂಡಿದ್ಲು. ಅದ್ರಲ್ಲೇ ರಿಯಲ್ ಎಸ್ಟೇಟ್ ಬಿಸಿನೆಸ್ ಶುರುಮಾಡಿದ್ಲು. ಈ ವೇಳೆ ಬೆಂಗಳೂರಿನ ಬಹುತೇಕ ರೌಡಿಗಳ ಪರಿಚಯವಾಗಿ, ಸಿದ್ದಿಕ್ ಎಂಬಾತನ ಜೊತೆ 3 ವರ್ಷ ಲೀವಿಂಗ್ ಟುಗೆದರ್ ರಿಲೇಶನ್‍ನಲ್ಲಿದ್ಲು. ಆದ್ರೆ ಆದನ ಜೊತೆಗೂ ಜಗಳವಾಗಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ಲು. ಈ ವೇಳೆ ಈ ಖರ್ತನಾಕ್ ನವೀನ್ ಪರಿಚಯವಾದ.
Advertisement
ಅರ್ಚನಾ ಹೆಸರಲ್ಲಿತ್ತು 40 ಕೋಟಿ ಆಸ್ತಿ!
ನವೀನ್ ಪರಿಚಯದ ಬಳಿಕ ಇಬ್ಬರ ಅರ್ಚನಾ ಜೊತೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಶುರುವಾಗಿತ್ತು. ಅರ್ಚನಾ ಹೆಸ್ರಲ್ಲಿದ್ದ ಆಸ್ತಿ ಮೇಲೆ ಕಿರಾತಕ ನವೀನನ ಕಣ್ಣು ಬಿದ್ದಿತ್ತು. 40 ಕೋಟಿ ಒಡತಿಯಾಗಿದ್ದ ಅರ್ಚನಾ ಚನ್ನಪಟ್ಟಣದಲ್ಲಿ 12 ಎಕರೆ ಜಮೀನು, ಜಿಗಣಿ, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ 2 ಐಷಾರಾಮಿ ಬಂಗಲೆ, ಐಷಾರಾಮಿ ಕಾರುಗಳನ್ನು ಹೊಂದಿದ್ದಳು. ಇದನ್ನೂ ಓದಿ: ಪತಿಯನ್ನು ಜೈಲಿನಿಂದ ಹೊರತರಲು ಸಹಾಯ ಮಾಡೋದಾಗಿ ಹೇಳಿ ಮಹಿಳೆಯ ರೇಪ್ ಮಾಡಿದ್ರು!
ನವೀನ್ ಜೊತೆ ಲಿವಿಂಗ್ ಟುಗೆದರ್ ರಿಲೇಷನ್‍ನಲ್ಲಿದ್ದ ಅರ್ಚನಾಗೆ ನವೀನ್ ಗೆಳೆಯ ರೌಡಿ ರೋಹಿತರ ಪರಿಚಯವಾಗಿತ್ತು. ಅವ್ನ ಜೊತೆಯೂ ಅರ್ಚನಾಗೆ ಸಂಬಂಧ ಶುರುವಾಗಿತ್ತು. ಇದೇ ವಿಚಾರವಾಗಿ ಅರ್ಚನಾ – ನವೀನ್ ನಡುವೆ ಜಗಳವಾಗಿತ್ತು. ಅರ್ಚನಾ ವರ್ತನೆಯಿಂದ ಬೇಸತ್ತಿದ್ದ ನವೀನ್ ಅರ್ಚನಾ ಪುತ್ರಿ ಯುವಿಕಾ ಜೊತೆ ತುಂಬ ಸಲುಗೆಯಿಂದ ಇರ್ತಿದ್ದ. ಯುವಿಕಾ ಜೊತೆ ಆಸ್ತಿಯೂ ಸಿಗುತ್ತೆ ಅಂತ ಮಗಳಿಗೆ ಬಲೆ ಬೀಸಿದ್ದ. ಈ ವಿಚಾರವನ್ನು ರೌಡಿ ರೋಹಿತ್ ಬಳಿ ಹೇಳಿಕೊಂಡಿದ್ದ ಅರ್ಚನಾ, ನವೀನ್‍ಗೆ ಬೆದರಿಕೆ ಹಾಕಿಸಿದ್ಲು.. ಇದರಿಂದ ಸಿಟ್ಟಿಗೆದ್ದಿದ್ದ ನವೀನ್ ಅರ್ಚನಾ ಕೊಲೆಗೆ ಸಂಚು ರೂಪಿಸಿದ್ದ.. ಅಂದುಕೊಂಡಂತೆ ಹೊಸೂರು ರಸ್ತೆಯಲ್ಲಿ ಡಿಸೆಂಬರ್ 27 ರಂದು ಅರ್ಚನಾಳನ್ನು ಯಮನಪಾದ ಸೇರಿಸಿದ್ದ.
ಇಡೀ ಪ್ರಕರಣವನ್ನು ಭೇದಿಸಿರೋ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿ ನವೀನ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ನಡುವೆ ಅರ್ಚನಾ ಪುತ್ರ ನವೀನ್ ಆಸ್ತಿಗಾಗಿ ತನ್ನ ಅಕ್ಕಳನ್ನು ಬಳಸಿಕೊಂಡಿದ್ದ ಅಂತ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಪೊಲೀಸರಿಗೆ ಅಮ್ಮನ ಕೊಲೆಗೆ ಮಗಳೇ ಕಾರಣವಾದಳಾ ಎಂಬ ಅನುಮಾನ ಮೂಡಿದ್ದು, ಆಕೆಯ ಬೆನ್ನು ಬಿದ್ದಿದ್ದಾರೆ. ಒಟ್ಟಿನಲ್ಲಿ ನಡುರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗಿ ಹೋದ 40 ಕೋಟಿಗೂ ಹೆಚ್ಚಿನ ಆಸ್ತಿಯ ಒಡತಿ ಅರ್ಚನಾ ಸಾವು ದಿನಕ್ಕೊಂದು ರೀತಿಯ ಟ್ವಿಸ್ಟ್ ಪಡೆಯುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ. ಇದನ್ನೂ ಓದಿ: ತಾಯಿ ಮೇಲೆ ಹಲ್ಲೆ ಮಾಡಿದನೆಂದು ಸಂಬಂಧಿಯನ್ನೇ ಕೊಂದ ಬಾಲಕಿಯರು!