ಹೆಸರಾಂತ ಧಾರಾವಾಹಿಯ ನಟಿಯೊಬ್ಬರು ಅದೇ ಧಾರಾವಾಹಿಯ ನಿರ್ಮಾಪಕನ (Producer) ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಸತತ ಹದಿನೈದು ವರ್ಷಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ (Tarak Mehta Ka Ulta Chashma) ಧಾರಾವಾಹಿಯ ನಿರ್ಮಾಪಕ ಅಸಿತ್ ಕುಮಾರ್ ಮೋದಿ (Asit Kumar Modi) ಹಾಗೂ ಮತ್ತಿಬ್ಬರು ತಮಗೆ ಲೈಂಗಿಕ ಕಿರುಕುಳ ಹಾಗೂ ತಮ್ಮೊಂದಿಗೆ ದುರ್ವತನೆ ತೋರಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
Advertisement
ಈ ಆರೋಪವನ್ನು ನಿರ್ಮಾಪಕಿ ಮೋದಿ ಅಲ್ಲಗಳೆದಿದ್ದು, ತಾವು ಯಾವತ್ತಿಗೂ ಯಾರೊಂದಿಗೆ ಆ ರೀತಿಯಲ್ಲಿ ವರ್ತನೆ ಮಾಡಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿ ಮುಂಬೈ ಪೊಲೀಸ್ ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ನಿರ್ಮಾಪಕ ಅಸಿತ್ ಕುಮಾರ್ ಮೋದಿ, ಪ್ರಾಜೆಕ್ಟ್ ಹೆಡ್ ಸೋಹಾಲಿ ರೊಮಾನಿ ಹಾಗೂ ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ಹೆಸರನ್ನು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ
Advertisement
Advertisement
ಈ ಧಾರಾವಾಹಿಯಲ್ಲಿ ನಟಿಯು ಮಾರ್ಚ್ 6ರಂದು ಕೊನೆಯ ಬಾರಿಗೆ ನಟಿಸಿದ್ದಾರೆ. ಮಾರ್ಚ್ 7 ರಂದು ಹೋಳಿಹಬ್ಬವಿದ್ದ ಕಾರಣದಿಂದಾಗಿ ಎರಡು ಗಂಟೆಗಳ ಕಾಲ ನಟಿ ಬ್ರೇಕ್ ಕೇಳಿದ್ದರಂತೆ. ಇತರ ನಟರಿಗೆ ಕೊಟ್ಟರೂ ತಮಗೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ನಿರ್ಮಾಪಕರಿಗೂ ನಟಿಗೂ ಜಗಳ ಆಗಿತ್ತು. ಅದನ್ನೆ ನೆಪವಾಗಿಟ್ಟುಕೊಂಡು ಲೈಂಗಿಕ ಆರೋಪ ಮಾಡಿದ್ದಾರೆ ಎನ್ನುವುದು ನಿರ್ಮಾಪಕರ ವಾದ.
Advertisement
ಆದರೆ, ಆ ನಟಿ ಹೇಳುವುದು ಬೇರೆ. ಸುಖಾಸುಮ್ಮನೆ ಮೈಮುಟ್ಟಲು ಬರುತ್ತಿದ್ದರಂತೆ. ಸಿಂಗಾಪುರದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ರೂಮ್ ಗೆ ಆಹ್ವಾನ ಮಾಡಿದ್ದರಂತೆ. ಇದು ತಮ್ಮ ಅನುಭವ ಮಾತ್ರವಲ್ಲ, ಇತರ ನಟಿಯರಿಗೂ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಈ ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.