DistrictsKarnatakaKodaguLatestMain Post

ತ್ರಿಕೋನ ಪ್ರೇಮ ಪ್ರಕರಣ – ರೆಡ್ ಹ್ಯಾಂಡಾಗಿ ಗೆಳೆಯನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿಗೆ ನಡು ರಸ್ತೆಯಲ್ಲೇ ಚಾಕು ಇರಿದ ಪ್ರಿಯಕರ

ಮಡಿಕೇರಿ: ಕೊಡಗಿನಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಕರಣ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ರೊಚ್ಚಿಗೆದ್ದ ಪ್ರಿಯಕರನೋರ್ವ ತನ್ನ ಪ್ರೇಯಸಿ ಮತ್ತು ಆಕೆಯೊಂದಿಗೆ ಇದ್ದ ಯುವಕನಿಗೆ ಚಾಕು ಇರಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಯುವಕ ಮತ್ತು ಯುವತಿ ಇಬ್ಬರು ಕುಶಾಲನಗರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಚಾಕು ಇರಿದ ಯುವಕ ಕುಶಾಲನಗರದ ಹೋಟೆಲ್ ಸಪ್ಲೆಯರ್ ಎಂದು ತಿಳಿದುಬಂದಿದೆ. ಈ ಸಂಬಂಧ ಇದೀಗ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತೀಯರಿಗಷ್ಟೇ ಅಲ್ಲ, ವಿದೇಶದಲ್ಲಿರುವ ಪ್ರಜೆಗಳಿಗೂ ರಕ್ಷಣಾತ್ಮಕ ಗುರಾಣಿ: ಮೋದಿ ಬಣ್ಣನೆ

ಏನ್ನಿದು ಪ್ರಕರಣ?
ಕಳೆದ ನಾಲ್ಕು ವರ್ಷದಿಂದ ಯುವಕನೋರ್ವ ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ನಾಲ್ಕು ವರ್ಷದಿಂದ ಪ್ರೀತಿ ಮಾಡಿದ ಯುವತಿ, ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಪ್ರಿಯಾಕರನೊಂದಿಗೆ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ. ಕುಶಾಲನಗರದ ಹೋಟೆಲ್ ಒಂದರಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ದಿನ ನಿತ್ಯ ಫೋನ್ ಮಾಡಿ ಯುವತಿಯ ಯೋಗ ಕ್ಷೇಮ ವಿಚಾರಿಸುತ್ತಿದ್ದ. ಅದರಂತೆ ಇಂದು ಕೂಡ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುವಾಗ ಎಲ್ಲಿದ್ಯಾ  ಎಂದು ಯುವಕ ಕೇಳಿದ್ದಾನೆ. ಇದಕ್ಕೆ ಯುವತಿ ತಾನು ಕಾಲೇಜಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. ಆದರೆ ಅನುಮಾನಗೊಂಡ ಯುವಕ ಇಂದು ಕುಶಾಲನಗರ ಕಾವೇರಿ ನಿಸರ್ಗಧಾಮಕ್ಕೆ ಹೋಗಿ ಹುಡುಕಾಟ ನಡೆಸಿದಾಗ ಈ ವೇಳೆ ಯುವತಿ ಮತ್ತೋರ್ವ ಯುವಕನೊಂದಿಗೆ ಇರುವುದನ್ನು ಕಂಡು ತನ್ನೊಂದಿಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ಇಲ್ಲಿ ಮತ್ತೋರ್ವನ ಜೊತೆ ಇದ್ಯಾ ಎಂದು ಪ್ರಿಯಕರ ಗಲಾಟೆ ಮಾಡಿದ್ದಾನೆ.

ಬಳಿಕ ಮೂವರು ಜಗಳವಾಡಿದ್ದಾರೆ. ಅಲ್ಲದೇ ತನ್ನೊಂದಿಗೆ ಇದ್ದ ಚಾಕುವನ್ನು ತೆಗೆದು ಯುವಕ, ಯುವತಿಗೆ ಪ್ರಿಯಕರ ಚುಚ್ಚಿದ್ದಾನೆ. ಚಾಕು ಇರಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಯುವಕ, ಯುವತಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಕು ಇರಿದ ಯುವಕ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಬಾರ್ ಓಪನ್ ಆದ ಒಂದೇ ವರ್ಷಕ್ಕೆ ಏಳಕ್ಕೂ ಹೆಚ್ಚು ಮಂದಿ ಸಾವು – ಬಾರ್ ಬಂದ್ ಮಾಡುವಂತೆ ಉಗ್ರ ಹೋರಾಟ

ಸದ್ಯ ಯುವಕ, ಯುವತಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ತ್ರಿಕೋನ ಪ್ರೇಮ ಪ್ರಕರಣವನ್ನು ಕುಶಾಲನಗರದ ಗ್ರಾಮಾಂತರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.

Live Tv

Leave a Reply

Your email address will not be published.

Back to top button