ಮುಂಬೈ: ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿಗೆ (IPL Auction) ಒಟ್ಟು 590 ಮಂದಿ ಶಾರ್ಟ್‌ಲಿಸ್ಟ್ ಆಗಿದ್ದಾರೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಬಿಡಗಡೆಗೊಳಿಸಬಲ್ಲ ಹಾಗೂ ಉಳಿಸಿಕೊಳ್ಳಬಲ್ಲ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಸಜ್ಜಾಗುತ್ತಿವೆ. ಇದರೊಂದಿಗೆ ಫ್ರಾಂಚೈಸಿಗಳ ನಡುವೆ ಆಟಗಾರರ ಟ್ರೇಡಿಂಗ್ ಕೂಡ ನಡೆಯುತ್ತಿದೆ.
Advertisement
ವಿಶೇಷವೆಂದರೆ ಈ ಬಾರಿ ಮಿನಿ ಹರಾಜಿಗೆ ಶಾರ್ಟ್‌ಲಿಸ್ಟ್ ಆದವರ ಪೈಕಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) 10 ಕ್ರಿಕೆಟಿಗರು (Cricketers) ಸೇರಿದ್ದಾರೆ. ತಕ್ಕಮಟ್ಟಿಗೆ ಆಡುವ ಮುಜ್ತಾಬಾ ಯೂಸುಫ್, ರಾಸಿಖ್ ಸಲಾಮ್, ಪರ್ವೇಜ್ ರಸೂಲ್, ಕಮ್ರಾನ್ ಇಕ್ಬಾಲ್, ಫಾಜಿಲ್ ರಶೀದ್, ಹೆನಾನ್ ಮಲಿಕ್, ಅಬಿದ್ ಮುಷ್ತಾಕ್, ನಾಸಿರ್ ಲೋನ್, ಔಕಿಬ್ ನಬಿ ಮತ್ತು ವಿವ್ರಾಂತ್ ಶರ್ಮಾ 10 ಆಟಗಾರರ ಬಗ್ಗೆ ಪ್ರಮುಖ ಫ್ರಾಂಚೈಸಿಗಳು ಆಸಕ್ತಿ ತೋರಿವೆ. ಇದನ್ನೂ ಓದಿ: ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್’ ಆಯೋಜನೆ: ಅನುರಾಗ್ ಠಾಕೂರ್
Advertisement
Advertisement
ಮುಜ್ತಾಬಾ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದಲ್ಲಿ ನೆಟ್ ಬೌಲರ್ ಆಗಿದ್ದರು, ಈ ಬಾರಿ ಅವರು ತಂಡಗಳಲ್ಲಿ ಒಂದರಲ್ಲಿ ಶಾಶ್ವತ ಸ್ಥಾನ ಪಡೆಯುವ ಉತ್ತಮ ಅವಕಾಶವಿದೆ. ಇನ್ನೂ ಹಿಂದಿನ ಮೂರು ಹರಾಜಿನಲ್ಲಿ ಮಾರಾಟವಾಗದ ನಂತರವೂ ಪರ್ವೇಜ್ ರಸೂಲ್ ಮತ್ತೊಮ್ಮೆ ತಮ್ಮ ಹೆಸದರನ್ನು 50 ಲಕ್ಷ ರೂ. ಮೂಲಬೆಲೆಗೆ ಹರಾಜಿಗೆ ಇಟ್ಟಿದ್ದಾರೆ. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್ ಬಗ್ಗೆ ಅಖಿಲೇಶ್ ಟೀಕೆ
Advertisement
ಮಹತ್ವದ ಬದಲಾವಣೆಗೆ ಮುಂದಾದ RCB: 16 ಆವೃತ್ತಿ ಕಳೆದರೂ ಒಂದು ಟೂರ್ನಿಯಲ್ಲೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಬಾರಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲು ಎದುರು ನೋಡುತ್ತಿದೆ. ಅದರಂತೆ ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನ ಹರ್ಷಲ್ ಪಟೇಲ್ ಅವರ ಸ್ಥಾನಕ್ಕೆ ಆಯ್ಕೆ ಮಾಡಲು ಬೆಂಗಳೂರು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?
ಹರ್ಷಲ್ ಪಟೇಲ್ 2021ರ ಐಪಿಎಲ್ ಟೂರ್ನಿಗಳಿಂದ ಆರ್‌ಸಿಬಿ ತಂಡಕ್ಕೆ ಪ್ರಮುಖ ಕೀ ಆಟಗಾರರಾಗಿದ್ದಾರೆ. 2021ರ ಆವೃತ್ತಿಯಲ್ಲಿ ಹರ್ಷಲ್ ಪಟೇಲ್ ಅವರು 15 ಪಂದ್ಯಗಳಿಂದ 32 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಪರ್ಪಲ್ ಕ್ಯಾಪ್ ಗೆದ್ದಿದ್ದರು. ಆದರೆ, ಕಳೆದ 2023ರ ಐಪಿಎಲ್ ಟೂರ್ನಿಯಲ್ಲಿ 13 ಪಂದ್ಯಗಳಿಂದ ಕೇವಲ 14 ವಿಕೆಟ್‌ಗಳನ್ನಷ್ಟೇ ಪಡೆದಿದ್ದರು. ಮತ್ತೊಂದೆಡೆ ಶಾರ್ದುಲ್ ಠಾಕೂರ್ ಅವರು 2023ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಕೆಲ ಪಂದ್ಯಗಳನ್ನು ಹೊರತುಪಡಿಸಿ ಶಾರ್ದುಲ್ ಠಾಕೂರ್ ಅವರು ಬಹುತೇಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಅಂದ ಹಾಗೆ ಮಿನಿ ಹರಾಜಿಗೂ ಮುನ್ನ ಬೆಂಗಳೂರು ಹಾಗೂ ಕೋಲ್ಕತಾ ಫ್ರಾಂಚೈಸಿಗಳು ಹರ್ಷಲ್ ಪಟೇಲ್ ಮತ್ತು ಶಾರ್ದುಲ್ ಠಾಕೂರ್ ಅವರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ.
ಶಾರ್ದುಲ್ ಠಾಕೂರ್ ಮತ್ತು ಹರ್ಷಲ್ ಪಟೇಲ್ ಇಬ್ಬರನ್ನೂ ಈ ಎರಡೂ ತಂಡಗಳು 10.75 ಕೋಟಿ ರೂ. ಗಳಿಗೆ ಖರೀದಿಸಿದ್ದವು ಎಂಬುದು ಆಸಕ್ತದಾಯಕ ಸಂಗತಿಯಾಗಿದೆ. ಶಾರ್ದುಲ್ ಠಾಕೂರ್ ಅವರು ಭಾರತ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಇತ್ತೀಚೆಗೆ ಮುಗಿದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದ್ದರಿಂದ ಬೌಲಿಂಗ್ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲರು ಎಂಬ ಕಾರಣದಿಂದ ಶಾರ್ದೂಲ್ ಠಾಕೂರ್ ಅವರನ್ನ ಆರ್‌ಸಿಬಿ ತನ್ನ ತಂಡಕ್ಕೆ ಕರೆತರಲು ಆಸಕ್ತಿ ತೋರಿದೆ.