ಬೆಂಗಳೂರು: ಈಗಾಗಲೇ ಕೇಂದ್ರ ಸರ್ಕಾರದಿಂದ 5 ಕೆ.ಜಿ ಅಕ್ಕಿ (Rice) ಕೊಡಲಾಗುತ್ತಿದೆ. ಇದರ ಜೊತೆ 10 ಕೆ.ಜಿ ಸೇರಿಸಿ ಒಟ್ಟು 15 ಕೆ.ಜಿ ಅಕ್ಕಿ ಕೊಡಬೇಕು. ಇದನ್ನು ಕಾಂಗ್ರೆಸ್‍ನವರು ಸ್ಪಷ್ಟಪಡಿಸಬೇಕು ಎಂದು ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ್ (Ashwath Narayan) ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರೆಂಟಿಗಳನ್ನ ಕಾಂಗ್ರೆಸ್ (Congress) ನವರು ಕೊಟ್ಟಿದ್ರು. ಮೊದಲ ಕ್ಯಾಬಿನೆಟ್ ನಲ್ಲೇ ಜಾರಿ ಮಾಡ್ತೀವಿ ಅಂದಿದ್ರು. ಈಗ ಮುಂದಿನ ಕ್ಯಾಬಿನೆಟ್ (Cabinet) ನಲ್ಲಿ ಅಂತಿದ್ದಾರೆ. 10 ಕೆ.ಜಿ ಅಕ್ಕಿ ಕೊಡ್ತೇವೆ ಅನ್ನುತ್ತಿದ್ದಾರೆ. ಈಗ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ ಕೊಡುತ್ತಿದೆ. ಅದರ ಜೊತೆ ನೀವು 10 ಕೆ.ಜಿ ಸೇರಿಸ್ತೀರಾ? ಅಥವಾ ನೀವು 5 ಕೆ.ಜಿ ಕೊಟ್ಟು 5 ಕೆ.ಜಿ ಕೇಂದ್ರದ್ದು ಕೊಡ್ತೀರಾ ಎಂದು ಪ್ರಶ್ನಿಸಿದರು.
Advertisement
Advertisement
ಗ್ಯಾರೆಂಟಿ (Congress Gurantee) ಗಳನ್ನ ಜಾರಿ ಮಾಡದೇ ಮುಂದಿನ ಕ್ಯಾಬಿನೆಟ್ ಅಂತಿದ್ದಾರೆ. ಈಗ ತಾತ್ವಿಕ ಒಪ್ಪಿಗೆ ಅಂತಿದ್ದೀರಾ?. ಹಾಗಿದ್ದರೆ ರಾಹುಲ್ ಗಾಂಧಿ ಕೈಯಲ್ಲಿ ಯಾಕೆ ಮೊದಲ ಕ್ಯಾಬಿನೆಟ್ ಜಾರಿ ಮಾಡ್ತೀವಿ ಅಂತ ಹೇಳಿಸಿದ್ರಿ. ಒಂದು ತಿಂಗಳು ಸಮಯ ತಗೊಂಡು ಕೊಡಬಹುದಿತ್ತು ಅಲ್ಲವಾ ಎಂದು ಕಾಂಗ್ರೆಸ್ ವಿರುದ್ದ ಅಶ್ವಥ್ ನಾರಾಯಣ್ ಕಿಡಿಕಾರಿದರು. ಇದನ್ನೂ ಓದಿ: Exclusive: ಸಿದ್ದು ಅದೃಷ್ಟದ ಮನೆಗೆ ಬೇಡಿಕೆ ಇರಿಸಿದ ಡಿಕೆಶಿ
Advertisement
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಂದ ಕೂಡಲೇ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಹಿಂದೆ ಕರೆಂಟ್ ಇಲ್ಲ ಅಂತ ಯುವಕ ಹೇಳಿದ್ದ. ಆಗ ಡಿಕೆಶಿ ಅವನನ್ನ ಒಳಗೆ ಹಾಕಿಸಿದ್ರು. ಈಗ ಹೊಸದುರ್ಗದ ಶಿಕ್ಷಕ ಫೇಸ್‍ಬುಕ್ ನಲ್ಲಿ ಹಾಕಿದ್ದಾರೆ. ಈಗ ಇವರ ವಿರುದ್ಧ ಮಾತಾಡಿದ ಅಂತ ಶಾಂತಪ್ಪ ಎಂಬ ಶಿಕ್ಷಕನನ್ನ ಸಸ್ಪೆಂಡ್ ಮಾಡಿಸಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಕಾಲದಲ್ಲೂ ಇದೇ ಇತ್ತು. ಈಗ ಮತ್ತೆ ಆದೇ ರೀತಿ ಆಗ್ತಿದೆ ಎಂದು ವಾಗ್ದಾಳಿ ನಡೆಸಿದರು.
Advertisement
ಸೋಮವಾರದ ಅಕಾಲಿ ಮಳೆ (Rain) ಸಂಬಂಧ ಪ್ರತಿಕ್ರಿಯಿಸಿ, ಅಕಾಲಿಕ ಮಳೆಯಿಂದ ಮಾವು ಬೆಳೆ ಹಾನಿಯಾಗಿದೆ. ರಾಮನಗರ, ಕೋಲಾರ ಸೇರಿ ಹಲವು ಜಿಲ್ಲೆಗಳಲ್ಲಿ ಮಾವು ಬೆಳೆ ಹಾನಿಯಾಗಿದೆ. ಈ ಬಾರಿ ಫಸಲು ಕಡಿಮೆ ಬಂದಿದೆ. ಕಡಿಮೆ ಫಸಲು ಬಂದು ನಿನ್ನೆ ಮಳೆಯಿಂದ ಬೆಳೆ ಹಾನಿ ಆಗಿದೆ. ಈಗ ಮಾವು (Mango) ಬೆಳೆಗಾರರಿಗೆ ನಷ್ಟ ಆಗಿದೆ. ಪ್ರತಿ ಟನ್ ಮಾವಿಗೆ 45-50 ಸಾವಿರ ಇತ್ತು. ಈಗ ಇಷ್ಟು ಹಣ ರೈತರಿಗೆ ಲಾಸ್ ಆಗುತ್ತೆ. ಕೂಡಲೇ ಮಾವು ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಬೇಕು. ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಬೇಕು ಎಂದರು.