ಕಳ್ಳತನ ಮಾಡಲು ಹೋಗಿ ಬಾಲಕಿಯನ್ನ ಅಪಹರಿಸಿದ ಖತರ್ನಾಕ್ ಕಳ್ಳ

Public TV
2 Min Read
ckd crime

ಚಿಕ್ಕೋಡಿ: ಕಳ್ಳತನ ಮಾಡಲು ಹೋಗಿ ಪುಟ್ಟ ಬಾಲಕಿಯನ್ನೇ ಅಪಹರಣ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಬಂಧಿತ ಆರೋಪಿ. ಪ್ರಕರಣವನ್ನು 8 ಗಂಟೆಗಳಲ್ಲಿ ಪೊಲೀಸರು ಸರು ಭೇದಿಸಿದ್ದಾರೆ. ಅನಿಲ್ ಲಂಬುಗೋಳ ಕಳೆದ ರಾತ್ರಿ ಕಳ್ಳತನ ಮಾಡಲು ಸುರೇಶ್ ಕಾಂಬಳೆ ಮನೆಗೆ ನುಗ್ಗಿದ್ದ. ಟ್ರೆಸರಿ ಬಾಗಿಲನ್ನು ಮುರಿಯುವ ಸಂದರ್ಭದಲ್ಲಿ ಮನೆಯವರು ಎಚ್ಚೆತ್ತುಕೊಂಡಿದ್ದಾರೆ.

chikkodi

ಈ ವೇಳೆ ಮನೆಯವರು ಜೋರಾಗಿ ಕಿರಿಚಾಡಿದ್ದಾರೆ. ಇದರಿಂದ ಭಯಗೊಂಡ ಅನಿಲ್, ಮನೆಯವರಿಗೆ ಮಗಳನ್ನು ಅಪಹರಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆದರೆ ಅಷ್ಟೋತ್ತಿಗಾಗಲೇ ಅಕ್ಕಪಕ್ಕದ ಮನೆಯವರು ಸೇರತೊಡಗಿದ್ದರು. ಇದರಿಂದಾಗಿ ಆರೋಪಿ ಅನಿಲ್ ಮನೆಯಲ್ಲಿ ಮಲಗಿದ್ದ 11 ವರ್ಷದ ಬಾಲಕಿಯನ್ನ ತನ್ನೊಡನೆ ಎತ್ತಿಕೊಂಡು ಅಪಹರಣ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

ಕೂಡಲೇ ಗ್ರಾಮಸ್ಥರು ಈಡಿ ಗ್ರಾಮವನ್ನು ಹುಡುಕಿದ್ದಾರೆ. ಆದರೆ ಅನಿಲ್ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾತ್ರಿಯೇ ಅಂಕಲಿ ಪೊಲೀಸ್ ಠಾಣೆಗೆ ತೆರಳಿ, ಸುರೇಶ್ ಕುಟುಂಬ ಅನಿಲ್ ವಿರುದ್ಧ ದೂರು ದಾಖಲಿಸಿದ್ದರು. ಇನ್ನು ದೂರು ದಾಖಲಿಸಿಕೊಂಡು ರಾತ್ರಿಯೇ ಕಾರ್ಯಾಚರಣೆ ಇಳಿದಿದ್ದ ಅಂಕಲಿ ಪೊಲೀಸರು ಎರಡು ತಂಡಗಳನ್ನು ರಚಿಸಿಕೊಂಡು ಆರೋಪಿ ಅನಿಲ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ ನಡೆದ ಎಂಟು ತಾಸಿನಲ್ಲಿಯೆ ಅನೀಲ್‍ನನ್ನು ಬಂಧಿಸಿದ್ದಾರೆ.

chikkodi hospital

ರಾತ್ರಿ ಅಪಹರಣ ಮಾಡಿದ್ದ ಬಾಲಕಿಯೊಡನೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮಕ್ಕೆ ತಮ್ಮ ಪರಿಚಯಸ್ಥರ ಮನೆಯಲ್ಲಿ ಅನಿಲ್ ಅವಿತು ಕುತಿದ್ದ. ಕಾರದಗಾ ಗ್ರಾಮಕ್ಕೆ ತೆರಳಿದ್ದ ಪೊಲೀಸರ 11 ವರ್ಷದ ಬಾಲಕಿಯನ್ನು ರಕ್ಷಿಸಿ ಹಾಗೂ ಅನಿಲ್ ಲಂಬುಗೋಳನನ್ನು ಬಂಧಿಸಿದ್ದಾರೆ. ಸದ್ಯ ಬಾಲಕಿಯನ್ನು ಚಿಕ್ಕೋಡಿ ಆಸ್ಪತ್ರೆ ದಾಖಲು ಮಾಡಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿ ಪಿತೂರಿ ನಡೆಸಿದೆ: ಶ್ರೀನಿವಾಸ್ ಮಾನೆ

crime

ಆರೋಪಿ ಅನಿಲ್ ಈ ಹಿಂದೆಯೂ ಅನೇಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಜೈಲಿನಲ್ಲಿದ್ದಾಗ ಎರಡು ಬಾರಿ ಜೈಲಿನಿಂದಲೆ ಪರಾರಿಯಾಗಿ ಮತ್ತೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಅನಿಲ್ ಮತ್ತೆ ತನ್ನ ಹಳೆ ಚಾಳಿಯನ್ನೆ ಮುಂದುವರಿಸಿದ್ದು, ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಅಂಕಲಿ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ಆರೋಪಿ ಅನೀಲ್‍ನನ್ನು ಬಂಧಿಸಿ ತನಿಖೆಯನ್ನ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *