CrimeDistrictsKarnatakaLatestMain Post

ಮನೆಯ ಮಾಲೀಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

ರಾಮನಗರ: ಕಳ್ಳತನ ಮಾಡಲು ಹೋಗಿ ಮನೆಯ ಮಾಲೀಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ರಾಮನಗರದ ಶಾಂತಿನಗರದಲ್ಲಿ ನಡೆದಿದೆ.

ಸತೀಶ್ ಕುಮಾರ್ ಹಾಗೂ ಚಂದ್ರಶೇಖರಯ್ಯ ಎಂಬವರು ಕಳ್ಳನನ್ನು ಹಿಡಿದು ಶೌರ್ಯ ಮೆರೆದ ಮನೆ ಮಾಲೀಕರು. ಮನೆಯಲ್ಲಿ ಯಾರು ಇಲ್ಲವೆಂದು ಭಾವಿಸಿ ಕಳ್ಳತನ ಮಾಡಲು ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮನೆ ಕಟ್ಟಡದಿಂದ ನುಸುಳಿ ಬಂದು ಕದಿಯಲು ಪ್ರಯತ್ನಿಸಿದ್ದಾನೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

ಮನೆ ಕೊಠಡಿಯಿಂದ ಬರುತ್ತಿರುವ ಶಬ್ದವನ್ನು ಗಮನಿಸಿದ ಮಾಲೀಕರಿಬ್ಬರೂ ಕಳ್ಳನನ್ನು ಬಿಗಿಯಾಗಿ ಹಿಡಿದುಕೊಂಡು ಜೋರಾಗಿ ಚೀರಾಡುತ್ತಾರೆ. ಬಳಿಕ ಚೀರಾಟ ಕೇಳಿಸಿಕೊಂಡ ಸ್ಥಳೀಯರು ಇವರಿಬ್ಬರ ನೆರವಿಗೆ ಬಂದು ಕಳ್ಳನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆ ಶೌಚಾಲಯ ಸ್ವಚ್ಛಗೊಳಿಸಿದ ಮಧ್ಯಪ್ರದೇಶದ ಸಚಿವ

ಈ ಕುರಿತು ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button