CinemaKarnatakaLatestMain PostSandalwoodTV Shows

‘ಜೊತೆ ಜೊತೆಯಲಿ’ ಸೀರಿಯಲ್ ಆರ್ಯವರ್ಧನ್ ಗೆ ಭೀಕರ ಕಾರು ಅಪಘಾತ: ಅನಿರುದ್ಧ ನಟಿಸುತ್ತಿದ್ದ ಪಾತ್ರ ಖತಂ?

ಜೀ ಕನ್ನಡ ವಾಹಿನಿಯು ಜೊತೆ ಜೊತೆಯಲಿ ಧಾರಾವಾಹಿಯ ಪ್ರೊಮೋವೊಂದನ್ನು ರಿಲೀಸ್ ಮಾಡಿದ್ದು, ಧಾರಾವಾಹಿಯ ಕಥೆಗೆ ಮೇಜರ್ ತಿರುವು ನೀಡಲಾಗಿದೆ. ಈವರೆಗೂ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲಿ ಇಟ್ಟುಕೊಳ್ಳಲಾಗುವುದು ಎಂದಿದ್ದ ನಿರ್ಮಾಪಕರು ಆ ಪಾತ್ರವನ್ನು ಸಾಯಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಅನುಮಾನ, ಆ ಪ್ರೋಮೋ ನೋಡಿದ ಮೇಲೆ ವ್ಯಕ್ತವಾಗಿದೆ. ಆರ್ಯವರ್ಧನ್ ಸ್ಪೀಡ್ ಆಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದು, ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆಯುತ್ತಾ ಸಾಗಿದೆ.

ಈಗಾಗಲೇ ಆರ್ಯವರ್ಧನ್ ಅವರ ಸಹೋದರನ ಪಾತ್ರಕ್ಕೆ ನಟ ಹರೀಶ್ ರಾಜ್ ಆಯ್ಕೆಯಾಗಿದ್ದಾರೆ. ಅವರ ನಟನೆಯ ದೃಶ್ಯಗಳು ಕೂಡ ಪ್ರಸಾರವಾಗುತ್ತಿವೆ. ಆರ್ಯವರ್ಧನ್ ನನ್ನು ಕೊಲ್ಲುವ ಮೂಲಕ, ಆತನ ಸಾಮ್ರಾಜ್ಯಕ್ಕೆ ಹರೀಶ್ ರಾಜ್ ಪಾತ್ರ ಅಧಿಪತಿ ಆಗತ್ತಾ ಎನ್ನುವ ಅನುಮಾನ ಕೂಡ ಮೂಡುತ್ತಿದೆ. ಅಥವಾ ಹರೀಶ್ ರಾಜ್ ಪಾತ್ರವೇ ಆರ್ಯವರ್ಧನ್ ನ ಸಾಯಿಸ್ತಾ ಎನ್ನುವ ಪ್ರಶ್ನೆ ಮೂಡುವಂತೆಯೂ ಪ್ರೊಮೋದಲ್ಲಿ ತೋರಿಸಲಾಗಿದೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಪಾತ್ರಧಾರಿಗಳನ್ನು ಬದಲಾಯಿಸಲು ಒಂದು ತಂತ್ರವನ್ನು ಉಪಯೋಗಿಸಲಾಗುತ್ತದೆ. ಆಕ್ಸಿಡೆಂಟ್ ಮಾಡಿಸಿ, ಪ್ಲಾಸ್ಟಿಕ್ ಸರ್ಜರಿ ಮೂಲಕ ಹೊಸ ಕಲಾವಿದನನ್ನು ಪರಿಚಯ ಮಾಡಿಸಲಾಗುತ್ತದೆ. ಅದೇ ಹಳೆ ತಂತ್ರವನ್ನು ಜೊತೆ ಜೊತೆಯಲಿ ಧಾರಾವಾಹಿ ತಂಡ ಮಾಡುತ್ತಾ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಕೂಡ ಗೊತ್ತಾಗಲಿದೆ. ಅಥವಾ ಪರ್ಮನೆಂಟ್ ಆಗಿ ಪಾತ್ರವನ್ನೇ ಮುಗಿಸುತ್ತಾರಾ ಅದು ಕೂಡ ಸಾಧ್ಯತೆ ಇದೆ.

ಇಂದು ರಿಲೀಸ್ ಆಗಿರುವ ಪ್ರೊಮೋ ನೋಡಿದರೆ ಇಂತಹ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿದ್ದು, ಸ್ವತಃ ಧಾರಾವಾಹಿ ತಂಡವೇ ಕಥೆಯಲ್ಲಿ ರೋಚಕ ತಿರುವು ಎಂದು ಹೇಳಿಕೊಂಡಿದ್ದರಿಂದ ಅಂತಹ ತಿರುವು ಏನು? ಯಾವ ತಂತ್ರವನ್ನು ಹೆಣೆದು ಆರ್ಯವರ್ಧನ್ ಪಾತ್ರವನ್ನು ಉಳಿಸಿಕೊಳ್ಳುತ್ತಾರಾ? ಅಥವಾ ಮನೆಗೆ ಕಳುಹಿಸುತ್ತಾರೆ ಎನ್ನುವುದು ಸದ್ಯಕ್ಕಿರುವ ಸಸ್ಪೆನ್ಸ್.

Live Tv

Leave a Reply

Your email address will not be published.

Back to top button